Breaking News

ನಮ್ಮವರೇ ನಮ್ಮ ಕಷ್ಟಕ್ಕೆ ಆಗೋದು.. ಕಿಮ್ಸ್​​ಗೆ ನೆರವಿನ ಹಸ್ತ ಚಾಚಿದ ಖಾಸಗಿ ಕಂಪನಿಗಳು..!

Spread the love

ಹುಬ್ಬಳ್ಳಿ: ಕೋವಿಡ್ ವ್ಯಾಪಕಗೊಂಡಿರುವ ಸಂದರ್ಭದಲ್ಲಿ ಸರ್ಕಾರದ ನೆರವಿಗೆ ಖಾಸಗಿ ಕಂಪನಿಗಳು ಮುಂದಾಗಿವೆ. ಸ್ವರ್ಣ ಗ್ರೂಪ್ ಆಪ್ ಕಂಪನಿಸ್, ದೇಶಪಾಂಡೆ ಫೌಂಡೇಶನ್, ಟಾಟಾ ಹಿಟಾಚಿ, ಟಾಟಾ ಮಾರ್ಕೊಪೊಲೊ ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ 570 ಬೆಡ್ ಗಳನ್ನು ನೀಡಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ 100 ಆಕ್ಸಿಜನ್ ಬೆಡ್‌ಗಳ ಕೋವಿಡ್ ಆಸ್ಪತ್ರೆಯನ್ನು ವೇದಾಂತ ಸಂಸ್ಥೆ ಯವರು ಕಿಮ್ಸ್ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.‌ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕೋವಿಡ್ ರೋಗಿಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಒದಗಿಸಲಾಗುವುದು ಎಂದರು.

ವಾತಾವರಣದಲ್ಲಿನ ಗಾಳಿಯಿಂದ ಆಕ್ಸಿಜನ್ ಹೀರಿ ರೋಗಿಗಳಿಗೆ ನೀಡುವ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತದೆ. ದೇಶದಲ್ಲಿ ಲಾಕಡೌನ್ ಹೇರುವ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದರು. ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಖಾಸಗಿ ಆಸ್ಪತ್ರೆಯವರಿಗೆ ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಯಿಂದ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ಕೋವಿಡ್ ರೋಗಿಗಳು ದಾಖಲಾಗುತ್ತಿದ್ದಾರೆ. ಇಂತಹವರ ಪ್ರಮಾಣ ಶೇ.30 ರಷ್ಟಿದೆ. ಮಾನವೀಯ ದೃಷ್ಟಿಯಿಂದ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆಸ್ಪತ್ರೆಗಳನ್ನು ಸಶಕ್ತಗೊಳಿಸುವ ಕಾರ್ಯ ನಡೆಯುತ್ತಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಯಲ್ಲಿ ತೊಂದರೆಯಾಗಿದೆ. ಇದನ್ನು ಅರಿಯಬೇಕು. ಮೇ1 ರಂದು ಲಸಿಕೆ ಏಕೆ ನೀಡಿಲ್ಲ ಎಂದು ರಾಜಕೀಯವಾಗಿ ಟೀಕೆ ಮಾಡಬಾರದು. ವಿರೋಧ ಪಕ್ಷದವರು ಹಿಂದೆ ಆಡಳಿತದಲ್ಲಿ ಇದ್ದವರೇ, ಅವರಿಗೆ ಪರಿಸ್ಥಿತಿಗಳ ಬಗ್ಗೆ ಅರಿವು ಇರುತ್ತದೆ. ಇದನ್ನು ಪರಾಮರ್ಶಿಸುವ ಬದಲು ಬೆಳಗಿನಿಂದ ಸಂಜೆವರೆಗೆ ಟೀಕೆ ಮಾಡುವಂತಾಗಬಾರದು ಎಂದರು.

ಹುಬ್ಬಳ್ಳಿ ಎಪಿಎಂಸಿ ಗೆ ಭೇಟಿ ನೀಡಿದಾಗ ಸದಸ್ಯರು ಹಾಗೂ ವ್ಯಾಪಾರಿಗಳು ಸಂಜೆಯ ವರೆಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ರೈತಾಪಿ ವರ್ಗ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹ ಸಮಯ ಸಾಲುತ್ತಿಲ್ಲ. ಅವುಗಳನ್ನು ಕೊಂಡು ಹೊಯ್ದು ಮಾರಾಟ ಮಾಡಲು ಸಮಯ ಸಾಲುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಸಡಲಿಕೆಗಳನ್ನು ನೀಡಬೇಕಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿದರೆ ಕೊರೋನಾ ಎದುರಿಸಲು ಸಾಧ್ಯವಿದೆ ಎಂದರು.

ಸ್ವರ್ಣ ಗ್ರೂಪ್ ಆಪ್ ಕಂಪನಿಸ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ ಪ್ರಸಾದ್ ಮಾತನಾಡಿ ಕಳೆದ ಬಾರಿಯು ಕಂಪನಿಯಿಂದ ಕಿಮ್ಸ್​ಗೆ ಸಹಾಯ ಒದಗಿಸಲಾಗಿದೆ. ಈ ಬಾರಿ ನೆರವು ಒದಗಿಸಲು ಕೋರಿದಾಗ ಕೋವಿಡ್ ಆಸ್ಪತ್ರೆಗಳಿಗೆ ಹಾಸಿಗೆಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹಾಗಾಗಿ ಕಂಪನಿ ವತಿಯಿಂದ 100 ಬೆಡ್​​ಗಳನ್ನು ನೀಡಲಾಗಿದೆ. ಅವಶ್ಯವಿರುವ ಔಷಧ, ಸಿರೆಂಜ್, ಗ್ಲೌಸ್, ಲ್ಯಾಬೋರೇಟರಿ ಅಲ್ಲಿ ಅವಶ್ಯಕವಾದ ಔಷಧೋಪರಣಗಳನ್ನು ಕೇಳಿದ್ದಾರೆ. ಇವುಗಳನ್ನು ಸಹ ವಾರದಲ್ಲಿ ಕೊಡುತ್ತವೆ.5 ಲಕ್ಷ ವೆಚ್ಚದ 5 ಆಕ್ಸಿಜನ್ ಕಾನ್ಸಟ್ರೇಟರ್ಸ್ ಗಳನ್ನು ಸಹ ಇಂಡಸ್ಟ್ರಿ ಒಕ್ಕೂಟದಿಂದ ನೀಡುವುದಾಗಿ ಹೇಳಿದರು.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ