Breaking News

ಅತ್ಯಾಚಾರಕ್ಕೆ ಯತ್ನ: ಸಂಬಂಧಿಯ ಮರ್ಮಾಂಗ ಕತ್ತರಿಸಿ ಹಂದಿಗಳಿಗೆ ಉಣಬಡಿಸಿದ ಸಂತ್ರಸ್ತೆಯ ಲವರ್​!​

Spread the love

ಬ್ರಾಸಿಲಿಯಾ: ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗ ಮತ್ತು ವೃಷಣಗಳನ್ನು ಕತ್ತರಿಸಿ ಕಾಡುಹಂದಿಗೆ ಆಹಾರವಾಗಿ ನೀಡಿರುವ ಘಟನೆ ಏಪ್ರಿಲ್​ 19ರಂದು ಬ್ರೆಜಿಲ್​ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

20 ವರ್ಷದ ಸೋದರಸಂಬಂಧಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಷಯವೂ ಉತ್ತರ ಬ್ರೆಜಿಲಿಯನ್​ ಮುನ್ಸಿಪಾಲಿಟಿಯ ಒಲ್ಹಾಸ್​ ಡಿ ಔಗಾ ಪಟ್ಟಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, 36 ವರ್ಷದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಲಾಗಿದೆ.

ಸೋದರಸಂಬಂಧಿ ಮನೆಯಲ್ಲಿ ಮಲಗಿದ್ದ ವೇಳೆ ಪಾನಮತ್ತ ಸ್ಥಿತಿಯಲ್ಲಿದ್ದ ಆರೋಪಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಆತನೊಂದಿಗೆ ಹೋರಾಡಿ ಹೇಗೋ ಸಂತ್ರಸ್ತೆ ಬಚಾವ್​ ಆಗಿದ್ದಾಳೆ. ಈ ವಿಚಾರ ಸಂತ್ರಸ್ತೆಯ ಬಾಯ್​ಫ್ರೆಂಡ್​ಗೆ ತಿಳಿಯುತ್ತಿದ್ದಂತೆ ತನ್ನ ಸಂಬಂಧಿ ಯುವಕನೊಂದಿಗೆ ಸೇರಿ ಸಂಬಂಧಿಯು ಆಗಿರುವ ಆರೋಪಿಯನ್ನು ಕಬ್ಬಿನ ಗದ್ದೆಗೆ ಬರುವಂತೆ ಹೇಳಿದ್ದಾರೆ.

ಆರೋಪಿ ಗದ್ದೆಗೆ ಬರುತ್ತಿದ್ದಂತೆ ಇಬ್ಬರು ಸೇರಿ ಆತನ ಮೇಲೆ ದಾಳಿ ಮಾಡಿದ್ದಾರೆ. ಚೆನ್ನಾಗಿ ಥಳಿಸಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಆರೋಪಿಯ ಬಟ್ಟೆ ತೆಗೆದು ಆತನ ಮರ್ಮಾಂಗ ಮತ್ತು ವೃಷಣಗಳನ್ನು ಕತ್ತರಿಸಿ ಕಾಡು ಹಂದಿಗಳಿಗೆ ಆಹಾರವಾಗಿ ನೀಡಿದ್ದಾರೆ.

ಇದಾದ ಬಳಿಕ ಆರೋಪಿಗೆ ಹೇಗೋ ಪ್ರಜ್ಞೆ ಬಂದಿದೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವ ಆಗುವುದನ್ನು ನೋಡಿ ಅಲ್ಲಿಂದ ಎದ್ದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿಕೊಂಡಿದ್ದಾನೆ. ಚಕಿತ್ಸೆ ನೀಡಿರುವ ವೈದ್ಯರು ಮರ್ಮಾಂಗವನ್ನು ಮರು ಜೋಡಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಮರ್ಮಾಂಗಕ್ಕಾಗಿ ಹುಡುಕಾಟವನ್ನು ನಡೆಸಿದ್ದಾರೆ. ಆದರೆ, ಅದು ಪತ್ತೆಯಾಗಲೇ ಇಲ್ಲ. ಅಷ್ಟರಲ್ಲಾಗಲೇ ಪ್ರಾಣಿಗಳು ಅದನ್ನು ತಿಂದಿಬಿಟ್ಟಿತು.

ಸದ್ಯ ಆರೋಪಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರ್ಮಾಂಗ ಕತ್ತರಿಸಿದ ಆರೋಪಿಗಳನ್ನು ಬ್ರೆಜಿಲ್​ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ


Spread the love

About Laxminews 24x7

Check Also

ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿ – ಆರ್​​ಎಸ್​​ಎಸ್ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ: ಡಿಸಿಎಂ

Spread the loveಬೆಂಗಳೂರು : ನಾನು ಅಪ್ಪಟ ಕಾಂಗ್ರೆಸಿಗ. ಹುಟ್ಟಿನಿಂದ ಕಾಂಗ್ರೆಸ್​ ಪಕ್ಷದಲ್ಲಿದ್ದೇನೆ. ಜೀವ ಇರುವ ತನಕವೂ ಕಾಂಗ್ರೆಸಿಗನಾಗಿಯೇ ಇರುತ್ತೇನೆ. ನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ