Breaking News

ಹುಟ್ಟೂರಿನಲ್ಲಿ ನೆರವೇರಿದ ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ

Spread the love

ತುಮಕೂರು: ಕೋವಿಡ್‌ನಿಂದ ಮೃತಪಟ್ಟ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ ಕುಣಿಗಲ್ ತಾಲ್ಲೂಕಿನ ಕೊಡಗಿಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.

ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು.ರಾಮು ಪಾರ್ಥೀವ ಶರೀರಕ್ಕೆ ಮಾಲಾಶ್ರೀ ಅಂತಿಮ ನಮನ ಸಲ್ಲಿಸಿದರು. ಪುತ್ರ ಆರ್ಯನ್ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಪುತ್ರಿ ಅನನ್ಯ ಇದ್ದರು.

ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ ರಾಮು (52) ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಿಧನ ಹೊಂದಿದ್ದರು. ಸೋಂಕು ಪೀಡಿತರಾಗಿದ್ದ ಅವರು ಏ. 24ರಂದು ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.ಮೂಲತಃ ಕುಣಿಗಲ್‌ನವರಾಗಿದ್ದ ರಾಮು ಅವರು ದೊಡ್ಡ ಬಜೆಟ್‌ನ ನಿರ್ಮಾಪಕರು (ಕೋಟಿ ರಾಮು) ಎಂದೇ ಖ್ಯಾತರಾಗಿದ್ದವರು. ಅವರಿಗೆ ಪತ್ನಿ ಮಾಲಾಶ್ರೀ, ಪುತ್ರಿ ಅನನ್ಯಾ, ಪುತ್ರ ಆರ್ಯನ್‌ ಇದ್ದಾರೆ.


Spread the love

About Laxminews 24x7

Check Also

ತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು

Spread the loveತ್ರಿಕಾಲ ಪೂಜಿತೆ ದಾನಮ್ಮದೇವಿ ದರ್ಶನ ಪಡೆದ ಸಚಿವ ಎಂಬಿಪಿ; ಪ್ರವಚನ ಆಲಿಸಿ ಸ್ವಾಮೀಜಿ ಆಶಿರ್ವಾದ ಪಡೆದ ಸಚಿವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ