ಬೆಳಗಾವಿ : ಕೊರೊನಾ ವೈರಸ್ ಹರಡದಂತೆ ಸರ್ಕಾರ ಜಾರಿಗೊಳಿಸಿರುವ ಸಂಡೇ ಲಾಕ್ ಡೌನ್ ಗೆ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ.
ಕುಂದಾನಗರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಸರ್ಕಾರಿ, ಖಾಸಗಿ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿದೆ. ಇನ್ನು ಅನಾವಶ್ಯಕತವಾಗಿ ತಿರುಗಾಡುವವರನ್ನು ತಡೆದು ಪೊಲೀಸರು ಬುದ್ದಿವಾತ್ತಿದ್ದಾರೆ..
ನಗರದ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಎಪಿಎಂಸಿ ಮಾರ್ಕೇಟ್, ಖಡೇಬಜಾರ, ಬಸ್ ನಿಲ್ದಾಣಗಳಲ್ಲಿ ಸಂಪೂರ್ಣ ಸ್ಥಬ್ಧವಾಗಿವೆ. ಅಗತ್ಯ ಸೇವೆ ಹೊರತು ಪಡೆಸಿ ಉಳಿದ ಅಂಗಡಿ ಮುಂಗಟ್ಟುಗಳು ತೆಗೆದಿರಲಿಲ್ಲ. ಇನ್ನೂ ರಸ್ತೆಯಲ್ಲಿ ದ್ವಿಚಕ್ರ ವಾಹನ ಸೇರಿ ಯಾವುದೇ ವಾಹನಗಳು ರಸ್ತೆ ಇಳಿದಿಲ್ಲ.
ಜಿಲ್ಲೆಯ ಅಥಣಿ, ಗೋಕಾಕ್, ರಾಯಬಾಗ ಸೇರಿ ರಲ್ಲ ತಾಲ್ಲೂಕಿನಲ್ಲಿ ಸಂಡೇ ಲಾಕ್ ಡೌನ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.