ಬೆಳಗಾವಿ: ಕೊರೊನಾ ಚಿಕಿತ್ಸೆಗೆ ಉಪಯೋಗಿಸಿದ ಪಿಪಿಟಿ ಕಿಟ್ ಸೇರಿದಂತೆ ಮೆಡಿಕಲ್ ವೆಸ್ಟ್ ನ್ನು ಬೇಕಾಬಿಟ್ಟಿ ಬಿಸಾಡಿದ ದೃಶ್ಯ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಹಿಂಬಾಗ ಕಂಡು ಬಂದಿದೆ.
ಆಸ್ಪತ್ರೆಯ ಹಿಂಭಾಗದಲ್ಲಿರುವ ಕಶದ ಡಬ್ಬಿಯಲ್ಲಿ ರಾಶಿ ರಾಶಿ ಮೆಡಿ ವೆಸ್ಟ್ ವಸ್ತುಗಳನ್ನು ಬೀಸಾಡಲಾಗಿದೆ.
ಕೊರೊನಾ ಮೆಡಿಕಲ್ ವೇಸ್ಟ್ ಸಾರ್ವಜನಿಕವಾಗಿ ಬೀಸಾಕದೇ ನಾಶಪಡಿಸಬೇಕೆಂಬ ನಿಯಮವಿದೆ. ಆದ್ರೆ ಅದನ್ನು ಗಾಳಿಗೆ ತೂರಿದ ಬಿಮ್ಸ್ ಸಿಬ್ಬಂದಿ, ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಬಿಸಾಕಿದ್ದಾರೆ.
ಸಿಬ್ಬಂದಿಯ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ.