Breaking News

ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆಗೆ ಪ್ರಚಂಡ ಬಹುಮತಗಳಿಂದ ಆರಿಸಿ ತರೋಣ​: ಎಂದು ಹೇಬ್ಬಾಳಕರ್

Spread the love

ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿ ಗ್ರಾಮದ ವಿವಿಧ ಸಂಘಟನೆಗಳ ಜೊತೆ ಬೆಳಗಾವಿ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಯವರ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಪ್ರಚಾರ ನಡೆಸಿದರು.
ದೇಶದ​ ಈ‌ಗಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಬಗ್ಗೆ ರಾಜ್ಯ ಹಾಗೂ​ ಕೇಂದ್ರದ​ ಬಿಜೆಪಿ ಸರ್ಕಾರಗಳಿಗೆ ಕಿಂಚಿ​ತ್ತೂ​ ಕಾಳಜಿ‌ ಇ​ಲ್ಲ. ಪ್ರತಿಯೊಬ್ಬರೂ ಮತ​ದ ಮೂಲಕ​ ​ಈ ಸರಕಾರಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಈ ಸರ್ಕಾರಗಳು ಅಚ್ಛೇ ದಿ​ನ್ ಎನ್ನುತ್ತ ತಮ್ಮ  ಬೇಳೆಬೇಯಿಸಿಕೊಳ್ಳುವುದರಲ್ಲಿ​ ನಿರತವಾಗಿವೆ​.​ ​ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಬಡವರ‌ ಮೇಲೆ ಬರೆ ಎಳೆಯುತ್ತಿವೆ​ ಎಂದು ಹೆಬ್ಬಾಳಕರ್ ಹೇಳಿದರು.
 
ಬಡವರ, ಶ್ರಮಿಕರ ಹಾಗೂ ರೈತರ ಬಗ್ಗೆ​  ಕಾಳಜಿ​ ಇಲ್ಲದ ಈ‌ ಸರ್ಕಾರಗ​ಳಿಗೆ ಜನರೇ ಉತ್ತರಿಸಲಿದ್ದಾರೆ​.​ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ಸಾಗಿಸಲಿಕ್ಕೆ ​ಜನರು ​ಹರ ಸಾಹಸ ​ಪ​ಡುತ್ತಿದ್ದಾರೆ​. ಮೊದಲು ಬೆಲೆ ನಿಯಂತ್ರಿಸಿ ನಿಮ್ಮ ಅಚ್ಛೇದಿನ್ ಶಪಥ ಪೂರೈಸಿ ಎಂದು ಅವರು ಬಿಜೆಪಿ ಸರಕಾರವನ್ನು ಆಗ್ರಹಿಸಿದರು. ​
ಭಾರತದಲ್ಲಿ ಸಾಮಾಜಿ​​ಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕರಲ್ಲಿ ಡಾ|| ಬಿ ಆರ್ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ, ಜೊತೆಗೆ ಭಾರತದ ಸಂವಿಧಾನ ರಚನೆಯಲ್ಲಿ ಗಣನೀಯ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಆದರ್ಶಗಳ​ನ್ನು​ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ​ಮೂಲಕ ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆಗೆ ಪ್ರಚಂಡ ಬಹುಮತಗಳಿಂದ ಆರಿಸಿ ತರೋಣ​ ಎಂದು ಹೇಬ್ಬಾಳಕರ್ ವಿನಂತಿಸಿದರು​.

Spread the love

About Laxminews 24x7

Check Also

ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ 1.50 ಕೋಟಿ ರೂಪಾಯಿ ವೆಚ್ಚದ ಕಟ್ಟಡದ ಕಾಮಗಾರಿಗೆ ಚಾಲನೆ

Spread the love ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ 1.50 ಕೋಟಿ ರೂಪಾಯಿ ವೆಚ್ಚದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ