Breaking News

ಸುಳೇಭಾವಿಯ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಗದ್ದುಗೆಯ ಸ್ಥಳದಲ್ಲಿ ಶ್ರೀ ಸತೀಶಣ್ಣನವರ ಪರ ಪಕ್ಷದ ಬೃಹತ್ ಶಕ್ತಿ ಪ್ರದರ್ಶನ “

Spread the love

ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ನಾಡು #ಸುಳೇಭಾವಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಪಕ್ಷದ ವತಿಯಿಂದ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರ ಬೃಹತ್ ಸಮಾವೇಶವನ್ನು ಕೈಗೊಳ್ಳಲಾಯಿತು.

ಸಮಾವೇಶ ಪ್ರಾರಂಭಕ್ಕೂ ಮುನ್ನ ಮುಕ್ಕೋಟಿ ದೇವಾನು ದೇವತೆಗಳು ವರುಣದೇವನ ಮುಖಾಂತರ ಹರಸಿ, ಆಶೀರ್ವದಿಸಿದ್ದು ನಿಜಕ್ಕೂ ಪವಾಡ, ಮಳೆಯ ಹನಿಗಳು ನಮ್ಮೆಲ್ಲರ ಮೇಲೆ ಹೂ ಗಳಂತೆ ಚೆಲ್ಲಿದ್ದು ಆ ದೇವಾನು ದೇವತೆಗಳ ವರ ಪ್ರಸಾದವೇ ಆಗಿದೆ, ಇದು ನಮ್ಮ ಗೆಲುವಿನ ಶುಭ ಸೂಚನೆ.

ಇವತ್ತಿನ ಸಂದರ್ಭದಲ್ಲಿ ಜನ ಸಾಮಾನ್ಯರು ಅಗತ್ಯ ವಸ್ತುಗಳ ಹಾಗೂ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಜನರ ಗೋಳನ್ನು ಕೇಳುವವರಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಹಾಗೂ ಇಂಧನ ಬೆಲೆ ಏರಿಕೆ ಗಗನಕ್ಕೆ ತಗೆದುಕೊಂಡು ಹೋಗಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿರುವುದು ಯಾವ ನ್ಯಾಯ..??

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಜನ ಸಾಮಾನ್ಯರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕೂಡಲೇ ಜನ ಸಾಮಾನ್ಯರ ಬೆನ್ನಿಗೆ ನಿಲ್ಲಲ್ಲಿ ಎನ್ನುವುದೇ ನಮ್ಮೆಲ್ಲರ ಆಗ್ರಹವಾಗಿದೆ.

ಕಳೆದೆರಡು ವರ್ಷಗಳಿಂದ ಪ್ರಕೃತಿಯ ವಿಕೋಪ ಹಾಗೂ ಕೊರೋನಾ ಸೋಂಕಿನಿಂದ ಜನರ ಸ್ಥಿತಿಗತಿಗಳು ಚಿ‌ಂತಾಜನಕವಾಗಿವೆ, ಜನರು ತಮ್ಮ ಉಪಜೀವನ ಸಾಗಿಸಲಿಕ್ಕೆ ತುಂಬಾನೇ ಕಷ್ಟಪಡುತ್ತಿದ್ದಾರೆ. ಕೊರೋನಾ ಹಟ್ಟಹಾಸದಿಂದ ಸಾಕಷ್ಟು ಜನ ನಷ್ಟ ಅನುಭವಿಸುತ್ತಿದ್ದರೆ, ಕೆಲವು‌ ಜನ ಕೆಲಸಗಳನ್ನೇ ಕಳೆದುಕೊಂಡಿದ್ದಾರೆ, ಇದಕೆಲ್ಲ ಯಾರು ಹೊಣೆ.? ಜನಸಾಮನ್ಯರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೊಡುಗೆ ಏನು?

ಮತ ಮಹಾಪ್ರಭುಗಳೇ ನೀವೇ ತಿರ್ಮಾನಿಸಿ, ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ, ಜನರ ಕಷ್ಟಗಳಗೆ ಸ್ಪಂದನೆ ಇಲ್ಲ, ಒಟ್ಟಾರೆಯಾಗಿ ನಾನು ಕೇಳಿಕೊಳ್ಳುವುದು ಇಷ್ಟೇ ಬೆಲೆ ಏರಿಕೆಯ ಮೂಲಕ ನಮ್ಮೆಲ್ಲರಿಗೂ ತೊಂದರೆ ಕೊಡುತ್ತಿರುವ ಕೇಂದ್ರ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ನಾವೆಲ್ಲರೂ ನಮ್ಮ ಶಕ್ತಿಯನ್ನು ತೋರಿಸೋಣ.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ಶ್ರೀ ಸತೀಶಣ್ಣ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರಾದ ಶ್ರೀ ಸಿದ್ದರಾಮಯ್ಯ, ಶ್ರೀ ಸಲೀಂ ಅಹಮದ್, ಶ್ರೀ ಕೆ ಎಚ್ ಮುನಿಯಪ್ಪ, ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಎಮ್ ಬಿ ಪಾಟೀಲ, ಶ್ರೀ ಎಸ್ ಆರ್ ಪಾಟೀಲ, ಶ್ರೀ ಆರ್ ವಿ ದೇಶಪಾಂಡೆ, ಶ್ರೀ ಪ್ರಕಾಶ ಹುಕ್ಕೇರಿ, ಶ್ರೀಮತಿ ಅಂಜಲಿ‌ ನಿಂಬಾಳ್ಕರ್, ಶ್ರೀ ಮಹಾಂತೇಶ ಕೌಜಲಗಿ, ಶ್ರೀ ಪ್ರಸಾದ ಅಬ್ಬಯ್ಯ, ಸಹೋದರ ಶ್ರೀ ಚನ್ನರಾಜ ಹಟ್ಟಿಹೊಳಿ, ಶ್ರೀ ವಿನಯ ನಾವಲಗಟ್ಟಿ, ಶಂಕರಗೌಡ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ