Breaking News

ಇದು ಮದುವೆಯ ಸಮಯ’ – ಪ್ರೇಯಸಿ ಮಿಹೀಕಾ ಬಗ್ಗೆ ರಾಣಾ ಮೆಚ್ಚುಗೆಯ ಮಾತು

Spread the love

ಹೈದರಾಬಾದ್: ಬಾಹುಬಲಿ ಖ್ಯಾತಿಯ ರಾಜ ಬಲ್ಲಾಳದೇವ ರಾಣಾ ದಗ್ಗುಬಾಟಿಯವರು ಮುಂದಿನ ತಿಂಗಳು ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರ ಜೊತೆ ಮದುವೆಯಾಗಲಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ತಾನು ಪ್ರೀತಿ ಬಲೆಯಲ್ಲಿ ಸಿಲುಕಿದ್ದೇನೆ ಎಂದು ಟ್ವೀಟ್ ಮಾಡಿದ್ದ ರಾಣಾ, ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ಅದರಂತೆ ಲಾಕ್‍ಡೌನ್ ನಡುವೆ ಆಗಸ್ಟ್ 8ರಂದು ರಾಣಾ ಮತ್ತು ಮಿಹೀಕಾ ಅವರ ಮದುವೆಯನ್ನು ಕುಟುಂಬದವರು ಫಿಕ್ಸ್ ಮಾಡಿದ್ದರು. ಆದರೆ ಈ ಕೊರೊನಾ ಆರ್ಭಟದ ನಡುವೆಯೂ ತಾನು ಪ್ರೀತಿಸಿದ ಮಿಹೀಕಾ ಬಜಾಜ್ ಅವರನ್ನು ನಿಶ್ಚಯ ಮಾಡಿಕೊಂಡ ದಿನ ಮದುವೆಯಾಗಲು ರಾಣಾ ನಿರ್ಧರಿಸಿದ್ದಾರೆ.

ಈಗ ಪ್ರೇಯಸಿಯ ಬಗ್ಗೆ ಮಾತನಾಡಿರುವ ಬಲ್ಲಾಳದೇವ, ನನಗೆ ಇದು ಮದುವೆಯ ಸಮಯ ಎನಿಸುತ್ತದೆ. ಮಿಹೀಕಾ ಕೂಡ ನಮ್ಮ ಮನೆಯ ಆಸು-ಪಾಸಿನಲ್ಲೇ ಇದ್ದಾರೆ. ಅವರ ಮನೆಗೆ ನಮ್ಮ ಮನೆಯಿಂದ ಕೇವಲ ಮೂರು ಕಿಮೀ ಆಗುತ್ತದೆ. ಆಕೆ ಬಹಳ ಒಳ್ಳೆಯವಳು, ನಾವಿಬ್ಬರೂ ಒಳ್ಳೆ ಜೋಡಿ ಎಂದು ನಾನು ಭಾವಿಸುತ್ತೇನೆ. ನಮಗೆ ನಮ್ಮ ಮದುವೆಯ ಬಗ್ಗೆ ಪಾಸಿಟಿವ್ ಯೋಚನೆಗಳು ಇದೆ. ನಾವು ಆಗಸ್ಟ್ 8ರಂದು ಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾನೂ ಕಳೆದ ಕೆಲ ತಿಂಗಳುಗಳಿಂದ ಆಕೆಯ ಜೊತೆಯೇ ಇದ್ದೇನೆ. ಈಗ ಇರುವ ಹಾಗೇ ಮುಂದೆಯೂ ಖುಷಿಯಾಗಿ ಇರುತ್ತೇವೆ ಎಂಬ ನಂಬಿಕೆ ನನಗೆ ಇದೆ. ಆಕೆ ಒಳ್ಳೆಯ ಮನಸ್ಸು ಇರುವ ಹುಡುಗಿ. ಕೊರೊನಾ ಲಾಕ್‍ಡೌನ್ ನಂತರ ಮದುವೆಯಾಗಲು ತೀರ್ಮಾನ ಮಾಡಿದ್ದೇವೆ. ಅದರಂತೆ ಮದುವೆಯಾಗುತ್ತಿದ್ದೇವೆ ಎಂದು ರಾಣಾ ದಗ್ಗುಬಾಟಿ ಅವರು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾನು ಪ್ರೀತಿಸುತ್ತಿರುವುದಾಗಿ ಕಳೆದ ಮೇ 12ರಂದು ಹೇಳಿಕೊಂಡಿದ್ದ ರಾಣಾ, ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಅವಳು ಓಕೆ ಎಂದಳು ಎಂದು ಬರೆದು ಮಿಹೀಕಾ ಅವರನ್ನು ಟ್ಯಾಗ್ ಮಾಡಿದ್ದರು. ಜೊತೆಗೆ ಮಿಹೀಕಾ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಕೂಡ ಪೋಸ್ಟ್ ಮಾಡಿದ್ದರು. ಇದಾದ ನಂತರ ಮೇ 21ರಂದು ರಾಣಾ ಮಿಹೀಕಾ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ