ಹುಬ್ಬಳ್ಳಿ, ಏಪ್ರಿಲ್ 3: ದಟ್ಟವಾದ ಮಂಜು ಹಾಗೂ ಮೋಡಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ, ಮಂಗಳೂರು ಕಡೆಗೆ ಹಾರಾಟ ನಡೆಸಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಪ್ರಯಾಣ ಬೆಳೆಸಿತು.
ಶನಿವಾರ ಬೆಳಗ್ಗೆ ಸರಿಯಾಗಿ 7.20ಕ್ಕೆ ಆಗಮಿಸಿದ ಇಂಡಿಗೋ ವಿಮಾನ, ಹುಬ್ಬಳ್ಳಿ ನಗರ ಸುತ್ತಮುತ್ತ ದಟ್ಟ ಮಂಜು ಆವರಿಸಿತ್ತು. ಲ್ಯಾಂಡ್ ಅಗಲು ವಾತಾವರಣ ಸಹಕಾರಿ ಆಗಲಿಲ್ಲ. ಸುಮಾರು ಇಪ್ಪತ್ತು ನಿಮಿಷದ ನಂತರ ಮಾರ್ಗ ಬದಲಿಸಿ ಮಂಗಳೂರಿಗೆ ತೆರಳಿತು. ವಿಮಾನದಲ್ಲಿ ಸುಮಾರು 65ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
Laxmi News 24×7