Breaking News

ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಹೈಕೋರ್ಟ್ ಮೆಟ್ಟಿಲೇರಿದ ಯುವತಿ ತಂದೆ

Spread the love

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಡಿ ಸಂತ್ರಸ್ತೆ ಹೇಳಿಕೆಗಳ ಬೆನ್ನಲ್ಲೇ ಯುವತಿಯ ತಂದೆ ಕೂಡ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಮಗಳ ಹೇಳಿಕೆಯನ್ನು ಪರಿಗಣಿಸದಂತೆ 21 ಪುಟಗಳ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯ ತಂದೆ ಏನ್ ಮನವಿ ಮಾಡಿದ್ದಾರೆ.

ನನ್ನ ಮಗಳು ಒತ್ತಡ, ಬಲವಂತದಿಂದ ಹೇಳಿಕೆ ಕೊಡ್ತಿದ್ದಾಳೆ. ಸಿಆರ್‍ಪಿಸಿ 164 ಅಡಿ ದಾಖಲಾಗಿರುವ ಹೇಳಿಕೆ ರದ್ದು ಮಾಡಿ. ಮೆಡಿಕಲ್ ಟೆಸ್ಟ್ ಮಾಡಿಸದೇ ಸಿಆರ್‍ಪಿಸಿ 164 ಹೇಳಿಕೆ ಸರಿಯಲ್ಲ. ನನ್ನ ಮಗಳು ಸಾಕಷ್ಟು ದಿನದಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ನನ್ನ ಮಗಳು ಸ್ವ-ಇಚ್ಛೆಯಿಂದ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಮಗಳು ಪ್ರಭಾವ, ಒತ್ತಡದ ಬಲಿಪಶುವಾಗಿದ್ದಾಳೆ. ನಮ್ಮ ಸುಪರ್ದಿಗೆ ಅಥವಾ ನ್ಯಾಯಾಂಗದ ಸುಪರ್ದಿಯಲ್ಲಿರಿಸಿ. ವಕೀಲರ ಮೂಲಕ ನನ್ನ ಮಗಳು ಕೋರ್ಟ್‍ಗೆ ಹಾಜರಾಗಿದ್ದಾಳೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಏಕೆ ಉಪಸ್ಥಿತರಿದ್ದರು..?, ಮಗಳು ಒತ್ತಡಕ್ಕೆ ಒಳಗಾಗಿದ್ದರೆ ತನಿಖಾಧಿಕಾರಿ ಮುಂದೆ ಏಕೆ ಹಾಜರಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ