Breaking News

ಇನ್​ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ ಮದ್ವೆ ಬಳಿಕ ಆತ್ಮಹತ್ಯೆ

Spread the love

ಹೈದರಾಬಾದ್​: ಪ್ರೀತಿ ಮತ್ತು ಮದುವೆ ಹೆಸರಿನಲ್ಲಿ ಪ್ರಿಯಕರನಿಂದ ಮೋಸ ಹೋದ ಯುವತಿ ತಂದೆಗೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಐಶ್ವರ್ಯಾ (25) ಮೃತ ಯುವತಿ. ಸೂರ್ಯಪೇಟ್​ ಮೂಲದ ಐಶ್ವರ್ಯಾ, ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿದ್ದಳು. ಇನ್​ಸ್ಟಾಗ್ರಾಂ ಮೂಲಕ ಮಿಯಾಪುರ್​ ಮೂಲದ ಆಶಿರ್​ ಕುಮಾರ್​ (26) ಎಂಬಾತನ ಪರಿಚಯ ಆಗಿತ್ತು. ಆಶಿರ್​ ಖೈರಾತಬಾದ್​ನ ಖಾಸಗಿ ಕಂಪನಿಯ ಉದ್ಯೋಗಿ.

ಸ್ನೇಹದ ಹೆಸರಿನಲ್ಲಿ ಐಶ್ವರ್ಯಾಳನ್ನು ಆಶಿರ್​ ಪರಿಚಯ ಮಾಡಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಅಲ್ಲದೆ, ಪಾಲಕರಿಗೆ ತಿಳಿಸದೇ ಇಬ್ಬರು ಕಳೆದ ವರ್ಷ (2020) ದೇವಸ್ಥಾನವೊಂದರಲ್ಲಿ ಮದುವೆ ಸಹ ಆಗಿದ್ದರು. ಬಳಿಕ ಇಬ್ಬರು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

 

ಹೀಗಿರುವಾಗ ಇಬ್ಬರ ಮದುವೆ ವಿಚಾರ ಮನೆಯವರಿಗೆ ತಿಳಿದಿದೆ. ಮೊದಲು ಜೀವನದಲ್ಲಿ ಸಶಕ್ತರಾಗಿ ಎಂದು ಇಬ್ಬರಿಗು ಬುದ್ಧಿವಾದ ಹೇಳಿ ತಮ್ಮ ತಮ್ಮ ಮನೆಗೆ ಕರೆದೊಯ್ದಿದ್ದರು. ಇತ್ತ ಆಶಿರ್​ ಮನೆಯಲ್ಲಿ ಮನವೊಲಿಸಿಬಿಡುತ್ತಾರೆ ಎಂಬ ಭಯದಲ್ಲೇ ಐಶ್ವರ್ಯಾ ಇದ್ದಳು. ಇತ್ತ ತನ್ನ ಮತ್ತೊಂದು ಮುಖವಾಡ ತೋರಿದ ಆಶಿರ್​ ಕೆಲಸವನ್ನು ಬಿಟ್ಟು ಆಕೆಯನ್ನು ನಿರ್ಲಕ್ಷಿಸಲು ಶುರು ಮಾಡಿದ.

ಅನೇಕ ದಿನಗಳವರೆಗೆ ಐಶ್ವರ್ಯಾಳನ್ನು ಆಶೀರ್​ ನಿರ್ಲಕ್ಷಿಸಿದ್ದಾನೆ. ಈ ಮಧ್ಯೆ ಗರ್ಭಿಣಿಯಾಗಿದ್ದ ಐಶ್ವರ್ಯಾಳಿಗೆ ಗರ್ಭಪಾತವಾಗಿ ತೀವ್ರವಾಗಿ ನೊಂದಿದ್ದಳು. ಈ ವಿಚಾರ ಆಶೀರ್​ಗೂ ತಿಳಿದಿತ್ತು. ಬಂಜಾರ ಹಿಲ್ಸ್​ನ ರಸ್ತೆ ನಂಬರ್​ 5ರ ಪಿಜಿಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಸುಮಾರು 20 ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಐಶ್ವರ್ಯಾ, ಆಶೀರ್​ಗೆ ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು. ಮಾರ್ಚ್​ 28ರ ಭಾನುವಾರ ಆಕೆ ಮಿಯಾಪುರ್​ನಲ್ಲಿರುವ ಆಶೀರ್​ ಮನೆಗೆ ತೆರಳಿದಳು. ಆದರೆ, ಆಶೀರ್​ ತಾಯಿ ಎಲ್ಲವನ್ನು ಇತ್ಯರ್ಥಗೊಳಿಸಲು ಬಲವಂತ ಮಾಡಿದಳು. ಅಲ್ಲದೆ, ಐಶ್ವರ್ಯಾಗೆ ಕಿರುಕುಳ ನೀಡಿದರು. ತುಂಬಾ ನೋವಿನಿಂದ ಪಿಜಿಗೆ ಮರಳಿದ ಐಶ್ವರ್ಯಾ, ದುಡುಕಿನ ನಿರ್ಧಾರ ತೆಗೆದುಕೊಂಡಳು.

ಮಾರ್ಚ್​ 30ರ ಸೋಮವಾರ ರಾತ್ರಿ ಐಶ್ವರ್ಯಾ ಪಿಜಿಯ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೂ ಮುನ್ನ ತನ್ನ ತಂದೆ, ಸಹೋದರ ಮತ್ತು ಪತಿ ಆಶೀರ್​ಗೂ ಪ್ರತ್ಯೇಕವಾಗಿ ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿ ಕಳುಹಿಸಿದ್ದಾಳೆ. ವಿಡಿಯೋ ನೋಡಿ ಶಾಕ್​ ಆದ ತಂದೆ, ತಕ್ಷಣ ಮಗಳಿಗೆ ಕರೆ ಮಾಡಿದ್ದಾರೆ. ಸ್ವೀಕರಿಸದಿದ್ದಾಗ ಕೊನೆ ಅವಳಿದ್ದ ಕೋಣೆಗೆ ತೆರಳಿ ನೋಡಿದಾಗ ಎಲ್ಲವು ಬಹಿರಂಗವಾಗಿದೆ.

ಅಪ್ಪ ನನ್ನನ್ನು ಕ್ಷಮಿಸಿ.. ನಾನು ತುಂಬಾ ಕಲ್ಪನೆ ಮಾಡಿಕೊಂಡಿದ್ದೆ… ಆತ ನನಗೆ ಮೋಸ ಮಾಡಿದ.. ಇದನ್ನು ನನ್ನಿಂದ ತಡೆದುಕೊಳ್ಳಲು ಆಗಲಿಲ್ಲ…ನಾನು ನಿಮ್ಮಿಂದ ಬಹು ದೂರ ಹೋಗುತ್ತಿದ್ದೇನೆಂದು ಸೆಲ್ಫಿ ವಿಡಿಯೋ ಮಾಡಿ ಐಶ್ವರ್ಯಾ ತಂದೆಗೆ ಕಳುಹಿಸಿದ್ದಾಳೆ.

ಮಗಳನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಪ್ರೀತಿಸಿ ಮದುವೆಯಾಗಿ ಬಳಿಕ ಮೋಸ ಮಾಡಿ ಮಗಳಿಗೆ ಮೋಸ ಮಾಡಿದ ಆಶೀರ್​ ಮೇಲೆ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ