ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ಸ್ವಲ್ಪ ಕೋಪ ಜಾಸ್ತಿ ಎಂಬುದು ಗೊತ್ತಿರುವ ವಿಚಾರ. ಹಾಗಂತ ಅವರು ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳುವ ಮಟ್ಟಕ್ಕೆ ಇಳಿಯುತ್ತಾರಾ? ಸದ್ಯಕ್ಕಂತೂ ಅಂಥ ಘಟನೆ ನಡೆದಿಲ್ಲ. ಆದರೆ ಈಗ ಸೋಶಿಯಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದಷ್ಟು ಜನರು ಮನಬಂದಂತೆ ಥಳಿಸುತ್ತಿದ್ದಾರೆ. ಹೊಡೆತ ತಿನ್ನುತ್ತಿರುವ ವ್ಯಕ್ತಿ ಅಜಯ್ ದೇವಗನ್ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಜಯ್ ದೇವಗನ್ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜಗಳದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮಾಲ್ವೊಂದರ ಎದುರಿನಲ್ಲಿ ಪಾನಮತ್ತರಾದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪಾರ್ಟಿ ಮಾಡಿದ ಬಳಿಕ ಐಷಾರಾಮಿ ಕಾರುಗಳ ಪಕ್ಕದಲ್ಲಿ ಒಂದಷ್ಟು ಜನರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಆ ಗುಂಪಿನಲ್ಲಿ ಅಜಯ್ ದೇವಗನ್ ಕೂಡ ಇದ್ದಾರೆ ಎಂಬ ಸುದ್ದಿ ಹಬ್ಬಿದೆ.
ಆದರೆ ಈ ವಿಡಿಯೋಗೆ ಸಂಬಂಧಿಸಿದಂತೆ ಅಜಯ್ ದೇವಗನ್ ತಂಡದವರು ಸ್ಪಷ್ಟನೆ ನೀಡಿದ್ದಾರೆ. ವೈರಲ್ ವಿಡಿಯೋದಲ್ಲಿ ಇರುವುದು ಅಜಯ್ ದೇವಗನ್ ಅಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ 14 ತಿಂಗಳಿನಿಂದ ಅಜಯ್ ದೇವಗನ್ ಅವರು ದೆಹಲಿಗೆ ತೆರಳಿಲ್ಲ. ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಸಿನಿಮಾದ ಪ್ರಮೋಷನ್ಗಾಗಿ ಅವರು ಕೊನೇ ಬಾರಿ ದೆಹಲಿಗೆ ತೆರಳಿದ್ದು 2020ರ ಜನವರಿಯಲ್ಲಿ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ಅಜಯ್ ದೇವಗನ್ ಅಲ್ಲ ಎಂಬುದು ಸ್ಪಷ್ಟವಾಗಿದೆಸಾಕಷ್ಟು ಸಿನಿಮಾಗಳಲ್ಲಿ ಅಜಯ್ ಬ್ಯುಸಿ ಆಗಿದ್ದಾರೆ. ಅಭಿಷೇಕ್ ಬಚ್ಚನ್ ನಟನೆಯ ‘ದಿ ಬಿಗ್ ಬುಲ್’ ಚಿತ್ರಕ್ಕೆ ಅವರು ಹಣ ಹೂಡಿದ್ದು, ಅದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದಲ್ಲಿ ಅವರಿಗೆ ಒಂದು ವಿಶೇಷ ಪಾತ್ರವಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲೂ ಅತಿಥಿ ಪಾತ್ರ ಮಾಡಿದ್ದಾರೆ. ಇದಲ್ಲದೆ, ‘ಭುಜ್’, ‘ಮೈದಾನ್’ ಮುಂತಾದ ಸಿನಿಮಾಗಳು ಅಜಯ್ ದೇವಗನ್ ಕೈಯಲ್ಲಿವೆ.
https://twitter.com/lalitkumartweet/status/1376279926207180803?ref_src=twsrc%5Etfw%7Ctwcamp%5Etweetembed%7Ctwterm%5E1376279926207180803%7Ctwgr%5E%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Fbollywood%2Fajay-devgn-reportedly-beaten-up-outside-delhi-his-team-issues-clarification-on-viral-video-mdn-207567.html