ಬೆಂಗಳೂರು: ಮಾಜಿ ಸಚಿವರ ವಿಡಿಯೋ ವಿವಾದಕ್ಕೆ ಸಂಬಂಧಿಸಿದ ಯುವತಿಯಿಂದ ನಮಗೆ ಯಾವುದೇ ವಿಡಿಯೋ ಬಂದಿಲ್ಲ ಎಂದು ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸ್ಪಷ್ಟನೆ ನೀಡಿದ್ದಾರೆ.
ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ ಅವರು ನಾವು ಯುವತಿಗೆ 5 ಬಾರಿ ನೋಟೀಸ್ ಕೊಟ್ಟಿದ್ದೇವೆ, ಆದರೆ ಆಕೆ ಯಾವುದೇ ಉತ್ತರ ನೀಡಿಲ್ಲ, ಯುವತಿ ವಿಡಿಯೋದಲ್ಲಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು. ಆಕೆ ಹೇಳಿರುವ ಸಮಯದಲ್ಲಿ ಎಸ್ಐಟಿ ರಚನೆಯೇ ಆಗಿರಲಿಲ್ಲ. ನಮಗೆ ಆ ಯುವತಿಯಿಂದ ಯಾವುದೇ ವಿಡಿಯೋ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಯುವತಿ.. ನಾನು12 ತಾರೀಕು ವಿಡಿಯೋ ಮಾಡಿ ಕಮೀಷನರ್ಗೆ ಮತ್ತು ಎಸ್ಐಟಿ ತಲುಪಿಸಿದ್ದೇನೆ. ಆದರೆ ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರಿಂದ ತರಾತುರಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿ ಅರ್ಧ ಗಂಟೆಗೆ ನನ್ನ ವಿಡಿಯೋ ಬಿಟ್ಟಿದ್ದಾರೆ. ನನಗೆ ಅರ್ಥ ಆಗ್ತಿಲ್ಲಾ ಎಸ್ಐಟಿ ಅವರು ಯಾರ ಪರ ಇದ್ದಾರೆ ಅಂತಾ. ಅವರು ಯಾರನ್ನ ಸೇವ್ ಮಾಡ್ತಿದ್ದಾರೆ ಅಂತಾ ಸಹ ಗೊತ್ತಾಗ್ತಿಲ್ಲಾ ಎಂದು ಎಸ್ಐಟಿ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.