ಬೆಂಗಳೂರು : ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ಸಿಡಿ ಪ್ರಕರಣನ ಸಿಡಿ ಲೇಡಿ ಪತ್ತೆಗೆ ಎಸ್‌ಐಟಿ ತಂಡ ಹರಸಾಹಸ ನಡೆಸುತ್ತಿತ್ತು. ಇದರ ಬೆನ್ನಲ್ಲೇ, ಪೋಷಕರ ಮೂಲಕ, ಸಿಡಿ ಲೇಡಿಯನ್ನು ಎಸ್‌ಐಟಿ ತಂಡ ಸಂಪರ್ಕಿಸಿದೆ. 5 ಬಾರಿ ಸಿಡಿ ಲೇಡಿ ತಮ್ಮನೊಂದಿಗೆ ಮಾತನಾಡಿರುವಂತ ಮಾಹಿತಿಯನ್ನು ವಿಚಾರಣೆಯ ವೇಳೆ ಎಸ್‌ಐಟಿ ಅಧಿಕಾರಿಗಳ ಮುಂದೆ ಪೋಷಕರು ಬಿಚ್ಚಿಟ್ಟಿದ್ದಾರೆ. ಹೀಗಾಗಿ ಐದನೇ ಬಾರಿ, ಸಿಡಿ ಲೇಡಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತಂಡ, ನೋಟಿಸ್ ನೀಡಿದೆ.
ಈಗಾಗಲೇ ಹಲವಾರು ಬಾರಿ ಸಿಡಿ ಲೇಡಿ ಪತ್ತೆಗೆ ಎಷ್ಟೇ ಪ್ರಯತ್ನಿಸಿದ್ದರೂ, ಎಸ್‌ಐಟಿ ತಂಡಕ್ಕೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರ ಮಧ್ಯೆ ಪೋಷಕರ ಮೂಲಕ, ಕೊನೆಗೂ ಸಿಡಿ ಲೇಡಿ ಸಂಪರ್ಕಿಸಲು ಎಸ್‌ಐಟಿ ತಂಡ ಯಶಸ್ವಿಯಾಗಿದೆ ಎನ್ನಲಾಗಿದೆ. ಸಿಡಿ ಲೇಡಿ, ಸಿಡಿ ಗ್ಯಾಂಗ್ ನ ವಶದಲ್ಲಿರುವುದಾಗಿ, ಆಕೆಯನ್ನು ಬಂಧನದಲ್ಲಿ ಇಟ್ಟುಕೊಂಡಿರೋದಾಗಿ ಎಸ್ ಐಟಿ ಅಧಿಕಾರಿಗಳ ಮುಂದೆ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
Laxmi News 24×7