Breaking News

ಅಹೋರಾತ್ರ ಮನೆಗೆ ನುಗ್ಗಿ ಸುದೀಪ್​ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್​ ಮಾಡಲು ಆಗ್ರಹ

Spread the love

ಕಿಚ್ಚ ಸುದೀಪ್​ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಕೆಲವರು ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ರೀತಿ ದಾಂಧಲೆ ಮಾಡಿದವರನ್ನು ಕಿಚ್ಚ ಸುದೀಪ್​ ಅಭಿಮಾನಿಗಳು ಎಂದು ಅಹೋರಾತ್ರ ದೂರಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಲೈವ್​ ವಿಡಿಯೋ ಮಾಡಿ ಬೇಸರ ಹೊರಹಾಕಿದ್ದಾರೆ.

ಇಂದು ಫೇಸ್​ಬುಕ್​ನಲ್ಲಿ ಅಹೋರಾತ್ರ ಲೈವ್​ ಬಂದಿದ್ದಾರೆ. ಈ ವೇಳೆ ಅವರ ಮನೆಗೆ ಒಂದಷ್ಟು ಜನರು ನುಗ್ಗಲು ಪ್ರಯತ್ನಿಸಿದ್ದಾರೆ. ಇದೆಲ್ಲ ಕಿಚ್ಚ ಸುದೀಪ್​ ಅಭಿಮಾನಿಗಳದ್ದೇ ಕೆಲಸ. ಅವರು ನನ್ನನ್ನು ಕೊಲ್ಲಲು ಬಂದಿದ್ದರು. ಕಿಚ್ಚ ಸುದೀಪ್​ ಈಗಲೇ ಅರೆಸ್ಟ್​ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಕಿಚ್ಚ ಸುದೀಪ್​ ರಮ್ಮಿ ಗೇಮ್​ನ ರಾಯಭಾರಿ ಆಗಿದ್ದರು. ಇದಕ್ಕೆ ಅಹೋರಾತ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಿಚ್ಚ ಅವರನ್ನು ಅಹೋರಾತ್ರ ನಿರಂತರವಾಗಿ ಟೀಕಿಸಿದ್ದರು. ಸುದೀಪ್​ ಮಾಡಿದ್ದು ಸರಿಯಲ್ಲ. ಅನೇಕರು ಆನ್​ಲೈನ್​ ಜೂಜಿನಿಂದ ಮನೆ ಮಠ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರು ಇದರ ರಾಯಭಾರಿ ಆಗಿರುವುದು ಸರಿಯಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲ ಸುದೀಪ್​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಅಹೋರಾತ್ರ ಅವರ ನಡೆಗೆ ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಇದು ಮುಂದುವರೆದರೆ ಸರಿ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಈ ವಿಚಾರದಲ್ಲಿ ಲೈವ್​ ಬಂದು ಮಾತನಾಡಿದ್ದ ಅಹೋರಾತ್ರ, ಕಿಚ್ಚನ ಅಭಿಮಾನಿಗಳು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಏಕವಚನದಲ್ಲೇ ಮಾತನಾಡಿದ್ದರು.

ಸತತವಾಗಿ ಸುದೀಪ್​ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸುದೀಪ್​ ಅಭಿಮಾನಿಗಳು ಅಹೋರಾತ್ರ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂಬುದು ಅಹೋರಾತ್ರ ಅವರ ಆರೋಪ. ಸದ್ಯ ಈ ವಿಚಾರ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆಯಂತೆ.

ಕಿಚ್ಚ ಸುದೀಪ್​ ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಬ್ಯುಸಿ ಇರುತ್ತಾರೆ. ಹೀಗಾಗಿ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಈ ಘಟನೆ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ