ಬೆಂಗಳೂರು: ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ.
ಮೈಸೂರು ರಸ್ತೆ, ಮೆಜೆಸ್ಟಿಕ್, ತುಮಕೂರು ರಸ್ತೆ, ಟೌನ್ ಹಾಲ್, ನವಯುಗ ಟ್ರೋಲ್ ಸೇರಿದಂತೆ ಅನೇಕ ಕಡೆ ವಾಹನಗಳು ಸಾಲಾಗಿ ನಿಂತಿದೆ. ಇದರಿಂದ ಅಧಿಕ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟೌನ್ ಹಾಲ್ ಮುಂಭಾಗ ಫುಲ್ ಟ್ರಾಫಿಕ್ ಆಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತಾ ಇದ್ದಾವೆ. ಕೆಲಸ, ಕಾರ್ಯ ಹೋಗುವವರು, ಸರ್ಕಾರಿ ಕಚೇರಿಗೆ ಹೋಗುವವರು ಸ್ವಂತ ವಾಹಗಳನ್ನು ಬಳಸುತ್ತಿರುವ ಹಿನ್ನೆಲೆ ವಾಹನಗಳ ಓಡಾಟ ಜಾಸ್ತಿ ಆಗಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಮೇಕ್ರಿ ಸರ್ಕಲ್ ಬಳಿಯೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿವೆ. ಅನ್‍ಲಾಕ್ ಆದ ಕೂಡಲೇ ಸಾಲು ಸಾಲು ವಾಹನಗಳು ರಸ್ತೆಗಿಳಿದಿವೆ. ಇದರಿಂದ ಎಂದಿನಂತೆ ಟ್ರಾಫಿಕ್ ಉಂಟಾಗುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಸಿಗ್ನಲ್ ಪ್ರಾರಂಭ ಮಾಡಿದ್ದಾರೆ. ಮೈಸೂರು ರಸ್ತೆಯಲ್ಲೂ ಕೂಡ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಇತ್ತ ಬೆಂಗಳೂರು ಆನ್‍ಲಾಕ್ ಹಿನ್ನೆಲೆಯಲ್ಲಿ ಮತ್ತೆ ಜನರು ತಮ್ಮ ತಮ್ಮ ಊರುಗಳು ಕಡೆ ವಾಪಸ್ ಹೋಗುತ್ತಿದ್ದಾರೆ. ಆದರೆ ಯಾರು ಕೂಡ ಬೆಂಗಳೂರಿನಿಂದ ವಾಪಸ್ ಬರುವುದು ಕಾಣಿಸುತ್ತಿಲ್ಲ. ಹೀಗಾಗಿ ಇಂದು ಕೂಡ ಬೆಂಗಳೂರಿಂದ ಜನರ ವಲಸೆ ಆರಂಭವಾಗಿದೆ. ಕೆಲವರು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ಅಂಗಡಿ ಸಾಮಾನು ಖಾಲಿ ಮಾಡಿಕೊಂಡು ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ನವಯುಗ ಟೋಲ್ ಬಳಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.