Breaking News

ಸಿಡಿ ಪ್ರಕರಣದಲ್ಲಿ ಇಬ್ಬರು ವಶಕ್ಕೆ, ಎಸ್‍ಐಟಿ ತನಿಖೆ ಚುರುಕು

Spread the love

ಬೆಂಗಳೂರು, ಮಾ.14- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ ಪೊಲೀಸರು ಇಂದು ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಸಿಡಿ ಪ್ರಕರಣ ಕುರಿತಂತೆ ಜಾರಕಿಹೊಳಿ ಅವರು ಪೊಲೀಸರಿಗೆ ದೂರು ನೀಡಿರುವುದು ಹಾಗೂ ಯುವತಿ ಸಾಮಾಜಿಕ ಜಾಲತಾಣದಲ್ಲಿ ತದ್ವಿರುದ್ಧ ಹೇಳಿಕೆ ನೀಡಿರುವುದರಿಂದ ತನಿಖೆಯ ವೇಗವನ್ನು ಎಸ್‍ಐಟಿ ಚುರುಕುಗೊಳಿಸಿದೆ.ಸಿಡಿಯಲ್ಲಿದ್ದಾರೆ ಎಂಬ ಯುವತಿಯ ಬಾಯ್‍ಫ್ರೆಂಡ್ ಮತ್ತು ಆತನ ಸ್ನೇಹಿತನನ್ನು ಎಸ್‍ಐಟಿ ಈಗ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿ ಪಡೆದುಕೊಳ್ಳುತ್ತಿದೆ. ಇದುವರೆಗೂ ಸಿಡಿ ಪ್ರಕರಣದಲ್ಲಿ ಎಂಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದು, ಇಬ್ಬ ರನ್ನು ವಶಕ್ಕೆ ಪಡೆದುಕೊಂಡಿದೆ.

ಈಗಾಗಲೇ ನಾಲ್ಕು ಮಂದಿ ಟಿವಿ ವರದಿಗಾರರನ್ನು ವಿಚಾರಣೆಗೊಳಪಡಿಸಿರುವ ಎಸ್‍ಐಟಿ ಪೊಲೀಸರು ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಜಮಾವಣೆಯಾಗಿರುವ ಒಬ್ಬ ವರದಿಗಾರನಿಗೆ ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಎಸ್‍ಐಟಿ ರಚನೆಯಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಐದು ಮಂದಿಯನ್ನು ವಿಚಾರಣೆಗೆ ಕರೆತಂದು ಕೆಲವು ಮಾಹಿತಿ ಪಡೆದು ಅವರುಗಳನ್ನು ಬಿಟ್ಟುಕಳುಹಿಸಿದ್ದರು.ಈ ನಡುವೆ ತಲೆಮರೆಸಿಕೊಂಡಿರುವ ಇಬ್ಬರು ಕಿಂಗ್‍ಪಿನ್‍ಗಳಿಗಾಗಿ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಎಸ್‍ಐಟಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ