Breaking News

ಶಿವರಾತ್ರಿಗೆ ಶಿವಣ್ಣನ ಭರ್ಜರಿ ಗಿಫ್ಟ್.ಹ್ಯಾಟ್ರಿಕ್ ಹೀರೋನ 125ನೇ ಸಿನಿಮಾ ಘೋಷಣೆ

Spread the love

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಬಳಗಕ್ಕೆ ಶಿವರಾತ್ರಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಅವರ 125ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಚಂದನವನದಲ್ಲಿ ನೂರು ಸಿನಿಮಾಗಳನ್ನು ಪೂರೈಸಿ 125 ನೇ ಚಿತ್ರಕ್ಕೆ ಶಿವಣ್ಣ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿ ನೀಡಿದ್ದಾರೆ.

ಶಿವಣ್ಣ ನಿನ್ನೆ (ಬುಧವಾರ) ಫೇಸ್‍ಬುಕ್ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾ ಘೋಷಣೆಯ ಸುಳಿವು ನೀಡಿದ್ದರು. ಅದರಂತೆ ಇಂದು ಮುಂಜಾನೆ ತಮ್ಮ125ನೇ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

‘ವೇದ’ನ ವೇಷದಲ್ಲಿ ಹ್ಯಾಟ್ರಿಕ್ ಹೀರೋ

ಇನ್ನು ಶಿವರಾಜ್ ಕುಮಾರ್ ಅವರ 125 ಸಿನಿಮಾ ಶೀರ್ಷಿಕೆ ‘ವೇದ’ ಎಂದು ಇಡಲಾಗಿದೆ. ಭಜರಂಗಿ ಸಿನಿಮಾ ಖ್ಯಾತಿಯ ಎ ಹರ್ಷ ‘ವೇದ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ.

ಖಡಕ್ ಲುಕ್ :

ಇಂದು ರಿಲೀಸ್ ಆಗಿರುವ ‘ವೇದ’ ಚಿತ್ರದ ಲುಕ್ ಖಡಕ್ ಆಗಿದೆ. ಮುಖದ ಮೇಲೆ ಬಿಳಿ ಗಡ್ಡ ಹೊತ್ತು ಕಾಣಿಸಿಕೊಂಡಿರುವ ಶಿವಣ್ಣನ ಖದರ್ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ‘ವೇದ’ನ ಲುಕ್‍ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕಥೆ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲವಾದರೂ, ಇದು 1960’ರ ಬ್ಯಾಕ್‍ಡ್ರಾಪ್ ಕಥೆ ಹೊಂದಿದೆ ಎನ್ನುವುದು ಸಿನಿಮಾ ಫಸ್ಟ್ ಲುಕ್‍ನಲ್ಲಿ ಚಿತ್ರತಂಡ ಸುಳಿವು ನೀಡಿದೆ.

ಇನ್ನು ಶೀಘ್ರದಲ್ಲೇ ಶಿವರಾಜ್ ಕುಮಾರ್ ಅವರು ‘ಭಜರಂಗಿ 2’ ಸಿನಿಮಾ ತೆರೆ ಮೇಲೆ ಬರಲಿದೆ. ಈ ಚಿತ್ರಕ್ಕೂ ಎ ಹರ್ಷ ಅವರ ನಿರ್ದೇಶನ ಇದೆ.

 

Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ