Breaking News

ಮದ್ಯಪ್ರಿಯರಿಗೆ ಗುಡ್ ನ್ಯೂಸ್, ವಾಹನ ಸವಾರರಿಗೆ ನಿರಾಸೆ!

Spread the love

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2021ನೇ ಸಾಲಿನ ಬಜೆಟ್ ನಲ್ಲಿ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದರೆ, ವಾಹನ ಸವಾರರಿಗೆ ನಿರಾಸೆ ಮೂಡಿಸಿದ್ದಾರೆ.

ಸೋಮವಾರ ಬಜೆಟ್ ಮಂಡಿಸಿದ ಅಬಕಾರಿ ಸುಂಕ ಏರಿಕೆ ಮಾಡದೇ ಇರುವ ಪ್ರಸ್ತಾಪವನ್ನು ಮುಂದಿಟ್ಟರು. ಅಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದಾಗಿ ಘೋಷಿಸಿದರು.

ಕೊರೊನಾ ವೈರಸ್ ಮತ್ತು ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಜನತೆಗೆ ರಾಜ್ಯ ಬಜೆಟ್ ನಲ್ಲಿ ನಿರಾಸೆ ಮೂಡಿಸಿದೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಮತ್ತು ಸೆಸ್ ಇಳಿಕೆ ಆಗುವ ನಿರೀಕ್ಷೆ ಹೊಂದಿದ್ದ ಜನರಿಗೆ ನಿರಾಸೆ ಆಗಿದೆ.

ಲಾಕ್ ಡೌನ್ ಸಡಿಲಗೊಂಡಾಗ ಅಬಕಾರಿ ಸುಂಕ ಏರಿಸಿದ್ದರಿಂದ ಹೊಸದಾಗಿ ಸುಂಕ ಏರಿಸಲಾಗಿಲ್ಲ. ಇದರಿಂದ ಮದ್ಯಪ್ರಿಯರು ಸಂತಸಗೊಂಡಿದ್ದಾರೆ


Spread the love

About Laxminews 24x7

Check Also

ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ ದಾಳಿ!

Spread the love ಬೆಳಗಾವಿಯಲ್ಲಿ ಖಾಕಿ ಆರ್ಭಟ: ಮದ್ಯದ ಮಾಫಿಯಾ, ಬೈಕ್ ಕಳ್ಳರು ಹಾಗೂ ಮಾದಕ ವ್ಯಸನಿಗಳ ವಿರುದ್ಧ ಸರಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ