ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಆ ಮಹಿಳೆಯ ಬಗ್ಗೆ ವಿವರಣೆ ಕೇಳಲು ಪೊಲೀಸರು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ, ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ. ಇದು ಯಾಕೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಇವರ ನಾಯಕನ ಜೊತೆಗಿನ ದೂರವಾಣಿ ಕರೆಗಳು, ಕಾಲ್ ರೆಕಾರ್ಡ್ ಮುಂತಾದವುಗಳ ಆಧಾರದ ಮೇಲೆ, ಸೆಕ್ಸ್ ಟೇಪ್ ನಲ್ಲಿರುವ ಮಹಿಳೆ ಆರ್ ಟಿ ನಗರದಲ್ಲಿರುವ ಮಹಿಳೆಯರ ವಸತಿ ಗೃಹದಲ್ಲಿದ್ದಳು ಎಂದು ತಿಳಿದು ಬಂದಿದೆ. ಆದರೆ ಈಕೆ 2019 ರಲ್ಲಿ ಪಿಜಿಗೆ ಸೇರಿದ್ದ ಆಕೆ ರಾಜಾಜಿನಗರದ ಐಟಿ ಕಂಪನಿಯೊ0ದರಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಳು. ಆದರೆ ಯಾವ ಕಂಪನಿ ಎಂದು ತಿಳಿಸಿರಲಿಲ್ಲ.
ಸೋಮವಾರ ಸೆಕ್ಸ್ ವಿಡಿಯೋ ವೈರಲ್ ಆಗುವುದಕ್ಕೂ ಮೊದಲು ಆಕೆ ಪಿಜಿ ಖಾಲಿ ಮಾಡಿದ್ದಾಳೆ. ಆಕೆಯ ಇಬ್ಬರು ಸ್ನೇಹಿತೆಯರಿಗೂ ಕೂಡ ಅವಳ ಬಗ್ಗೆ ಮಾಹಿತಿಯಿಲ್ಲ, ಸೋಮವಾರ ಕೊನೆಯದಾಗಿ ಆಕೆಯನ್ನು ನೋಡಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Laxmi News 24×7