Breaking News

TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!

Spread the love

ನವ ದೆಹಲಿ : ಟಿ ಆರ್ ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಾಡ್ ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್ ಶ್ಯೂರಿಟಿ ಮೇರೆಗೆ ಜಾಮೀನು ನೀಡಿದೆ.

2 ಲಕ್ಷ ಶ್ಯೂರಿಟಿ ಮೇರೆಗೆ ಪಾರ್ಥೋ ಗುಪ್ತಾ ಅವರಿಗೆ ಬಾಂಬೆ ಕೋರ್ಟ್ ಜಾಮೀನು ನೀಡಿದ್ದು, ಆರು ತಿಂಗಳುಗಳ ಕಾಲ ಪ್ರತಿ ಶನಿವಾರ ಮುಂಬೈ ಪೊಲೀಸರ ಅಪರಾಧ ಶಾಖೆಗೆ ವಿಚಾರಣೆಗಾಗಿ ಭೇಟಿ ನೀಡಬೇಕು ಎಂದು ಹೇಳಿದೆ.

ನ್ಯಾಯ ಮೂರ್ತಿ ಪಿ ಡಿ ನಾಯ್ಕ್ ದಾಸ್ ಗುಪ್ತಾ ಅವರ ಜಾಮೀನು ಅರ್ಜಿಯಲ್ಲಿ, ತೀರ್ಪನ್ನು ಎರಡು ವಾರಗಳ ಹಿಂದೆಯೇ ತೀರ್ಪನ್ನು ಕಾಯ್ದಿರಿಸಿದ್ದರು. ಕ್ರಿಮಿನಲ್ ಪ್ರೊಸಿಜರ್ ಸೆಕ್ಶನ್ 439ರ ಅಡಿಯಲ್ಲಿ ಮೆರಿಟ್ಸ್ ಹಾಗೂ ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆದಿದ್ದಾರೆ.

ಓದಿ : ಕಾರ್ಕಳ; ಆಮ್ಲಜನಕದ ಕೊರತೆ; ಬಾವಿಗೆ ಇಳಿದ ಓರ್ವ ಕಾರ್ಮಿಕ ಸಾವು, ಇಬ್ಬರು ಅಸ್ವಸ್ಥ

ಮುಂಬೈ ಸೆಶನ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಹೈಕೋರ್ಟ್ ಗೆ ಜನವರಿಯಲ್ಲಿ ಜಾಮೀನು ನೀಡುವಂತೆ ಕೋರಿದ್ದರು.

ಜಾಮೀನು ವಿಚಾರಣೆಯ ವೇಳೆ ಹಿರಿಯ ವಕೀಲ ಆಬಾದ್ ಪಾಂಡಾ ಮತ್ತು ವಕೀಲ ಶಾರ್ದುಲ್ ಸಿಂಗ್ ಅವರು ದಾಸ್‌ ಗುಪ್ತಾ ಪರವಾಗಿ ಕೋರ್ಟಿಗೆ ಜಾಮೀನು ಕೋರಿ ಸಲ್ಲಿಕೆ ಮಾಡಿದರು. ಸಿ ಆರ್‌ ಪಿ ಸಿ ಯ ನಿಬಂಧನೆಗಳ ಪ್ರಕಾರ ನಿರ್ದಿಷ್ಟಪಡಿಸಿದಂತೆ 60 ದಿನಗಳ ಅವಧಿಯಲ್ಲಿ ದಾಸ್‌ ಗುಪ್ತಾ ವಿರುದ್ಧ ದೊಡ್ಡ ಪ್ರಮಾಣದ ಚಾರ್ಜ್‌ ಶೀಟ್ ದಾಖಲಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಿಚಾರಣೆ ಮತ್ತು ತನಿಖೆ ಪೂರ್ಣಗೊಳ್ಳದಿದ್ದರೆ, ಅವರ ವಿರುದ್ಧದ ಆರೋಪಪಟ್ಟಿಯನ್ನು ಸಲ್ಲಿಸಬಾರದು ಎಂಬುದು ಅವರ ವಾದವಾಗಿತ್ತು.

ಜನವರಿ 22 ರಂದು ದಾಸ್‌ ಗುಪ್ತಾ ಪರ ವಕೀಲ ಅರ್ಜುನ್ ಸಿಂಗ್ ಠಾಕೂರ್ ಅವರು ತಮ್ಮ ಕ್ಲೈಂಟ್‌ ನನ್ನು ಮುಂಬೈನ ಜೆಜೆ ಆಸ್ಪತ್ರೆಯಿಂದ ವರ್ಗಾವಣೆ ಮಾಡಿದ ನಂತರ ತಲೋಜಾ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡುವಲ್ಲಿ ತುರ್ತು ಮಧ್ಯಪ್ರವೇಶ ಕೋರಿ ಕೋರ್ಟ್ ಗೆ ಕೇಳಿಕೊಂಡಿದ್ದರು.

ಟಿ ಆರ್ ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 24 ರಂದು ಪಾರ್ಥೋ ದಾಸ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು.


Spread the love

About Laxminews 24x7

Check Also

ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ

Spread the loveಕೊಪ್ಪಳ, ಅಕ್ಟೋಬರ್​ 14: ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Abhinava Gavisiddeshwara Swamiji) ನಡೆದಾಡುವ ದೇವರು ಎಂದೇ ಪ್ರಸಿದ್ದ. ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ