Breaking News

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

Spread the love

ಗದಗ: ಹಾವನ್ನ ಕಂಡ್ರೆ ಸಾಕು ಮಾರುದ್ದ ಓಡುವ ಜನರ ಸಂಖ್ಯೆಯೇ ಹೆಚ್ಚು. ‘ಹಾವು’ ಅಂದ್ರೆ ನಿದ್ರೆಯಲ್ಲೂ ಹಲವರು ಬೆಚ್ಚಿಬೀಳ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ಹಾವಿನ ಜೊತೆ ಚೆಲ್ಲಾಟವಾಡುತ್ತ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ.

ಇಂತಹ ಘಟನೆ ರೋಣ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಮಕ್ತುಮ್ ಸಾಬ ರಾಜೆಖಾನ್ (75) ಮೃತ ದುರ್ದೈವಿ. ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

ಹಲವು ವರ್ಷಗಳಿಂದ ಹಾವು ಹಿಡಿಯುವದರಲ್ಲಿ ಈ ವೃದ್ಧ ನಿಪುಣನಾಗಿದ್ದ. ಇಂದು ತಹಸೀಲ್ದಾರ್​ ಕಚೇರಿ ಆವರಣದಲ್ಲಿ ಹಾವು ಕಾಣಿಸಿಕೊಂಡಿತ್ತು. ಅದನ್ನು ಹಿಡದವ ಸುಮ್ಮನೆ ಕಾಡಿಗೆ ಬಿಡುವ ಬದಲು ಹಾವಿನ್ನ ಕೈಯಲ್ಲಿ ಹಿಡಿದುಕೊಂಡು ಆಟವಾಡಿದ್ದ. ಈ ವೇಳೆ ವೃದ್ಧನಿಗೆ ಹಾವು ಕಚ್ಚಿತು. ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ವೃದ್ಧ ಬದುಕುಳಿಯಲಿಲ್ಲ. ರೋಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ