ಬೆಳಗಾವಿ: ಅಮಾಯಕ ಹೆಣ್ಣು ಮಕ್ಕಳನ್ನು ಕರೆತಂದು ಅನೈತಿಕ ಚಟುವಟಿಕೆಗಳಿ ಬಳಸಿಕೊಳ್ಳುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು, ಹೊರ ರಾಜ್ಯಗಳಿಂದ ಬಡ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವುದಾಗಿ ಹೇಳಿ ಕರೆತಂದು ಮನೆಯಲ್ಲಿರಿಸಿಕೊಂಡು ಅವರನ್ನು ಅನೈತಿಕ ಚಟುವಟಿಕೆಗಳ ದಂಧೆಗೆ ಬಳಸಿಕೊಳ್ಳುತ್ತಿದ್ದರು. ಪ್ರತಿ ಗಿರಾಕಿಗಳಿಂದ 2500ರೂ ಪಡೆಯುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆದರಿಸಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು 30 ವರ್ಷದ ಮಾರುತಿ ಬಾಳಪ್ಪ ಕಳಗೇರಿ ಹಾಗೂ 33 ವರ್ಷದ ಸಿದ್ದಪ್ಪ ಪುಂಡಲೀಕ ಚೌಗಲಾ ಎಂದು ಗುರುತಿಸಲಾಗಿದೆ.
Laxmi News 24×7