Breaking News

ಗರ್ಭಿಣಿ ಶ್ವಾನವೊಂದಕ್ಕೆ ಹುಬ್ಬಳ್ಳಿಯಲ್ಲಿ ಸೀಮಂತ ಮಾಡಿ ಪ್ರೀತಿ ತೋರಿದ್ದಾರೆ.

Spread the love

ಹುಬ್ಬಳ್ಳಿ: ಗರ್ಭಿಣಿ ಶ್ವಾನವೊಂದಕ್ಕೆ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಸೀಮಂತ ಮಾಡಿ ಪ್ರೀತಿ ತೋರಿದ್ದಾರೆ.ಸಾಮಾನ್ಯವಾಗಿ ಮೊದಲ ಬಾರಿಗೆ ಗರ್ಭವತಿಯಾದ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದನ್ನು ನೋಡಿದ್ದೇವೆ. ಆದರೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿರುವ ಕುಟುಂಬವೊಂದು ಮನೆಯಲ್ಲಿ ಸಾಕಿದ್ದ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದೆ.

ಗ್ರಾಮದ ಸಾರಿಗೆ ನೌಕರ ರಮೇಶ್ ಪಡತೇರ್ ಎಂಬವರು ತಮ್ಮ ಮನೆಗೆ ಕಳೆದ ವರ್ಷ ಶ್ವಾನವೊಂದನ್ನು ತಗೆದುಕೊಂಡು ಬಂದಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣ ಮಾಡಿದ್ದರು. ಇದೀಗ ಈ ಶ್ವಾನ ಗರ್ಭವನ್ನು ಧರಿಸಿದೆ.

ಹಾಗಾಗಿ ಸಾರಿಗೆ ನೌಕರ ರಮೇಶ್ ಪಡತೇರ್ ಅವರ ಪುತ್ರ ಪೃಥ್ವಿರಾಜ್ ಪಡತೇರ್ ಮತ್ತು ಕುಟುಂಬದವರು ಮಹಿಳೆಯರಿಗೆ ಸೀಮಂತ ಮಾಡುವಂತೆ ಶ್ವಾನಕ್ಕೂ ಬಳೆ ಹಾಕಿ, ಸೀರೆ ಉಡಿಸಿ, ಹೂವಿನ ಮಾಲೆಯನ್ನು ಹಾಕಿ, ಮೊದಲ ಬಾರಿಗೆ ಗರ್ಭವತಿಯಾದ ಶ್ವಾನಕ್ಕೂ ಅದ್ದೂರಿಯಾಗಿ ಸೀಮಂತ ಮಾಡಿದರು.


Spread the love

About Laxminews 24x7

Check Also

ಶಾಂತೈ ವೃದ್ಧಾಶ್ರಮದ ಸಹಯೋಗದೊಂದಿಗೆ ಕಪ್ಲೇಶ್ವರ ಚೌಕ್ ಗಣೇಶೋತ್ಸವದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು

Spread the love ಶಾಂತೈ ವೃದ್ಧಾಶ್ರಮದ ಸಹಯೋಗದೊಂದಿಗೆ ಕಪ್ಲೇಶ್ವರ ಚೌಕ್ ಗಣೇಶೋತ್ಸವದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು ಹೃದಯಸ್ಪರ್ಶಿ ಸತ್ಕಾರದಲ್ಲಿ, ಕಪ್ಲೇಶ್ವರ ಚೌಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ