ಕನ್ನಡ ಸಿನಿಮಾರಂಗಕ್ಕೆ ಮಾರಕವಾಗುವ ಕೆಲಸಗಳು ನಡೆಯುತ್ತಿವೆ. ಅವುಗಳಿಂದ ಚಿತ್ರರಂಗವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಖ್ಯಾತ ನಿರ್ದೇಶಕ, ನಟ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೆ ಅಡ್ಡಿಯಾದ ಹಿನ್ನಲೆ ಚಿತ್ರತಂಡ ಫಿಲ್ಮ್ ಚೇಂಬರ್ ಗೆ ದೂರು ನೀಡಿದೆ. ಈ ಬಗ್ಗೆ ಮಡಿಕೇರೆಯಲ್ಲಿ ಮಾತನಾಡಿದ ನಾಗಾಭರಣ ಭಾಷೆ ವಿಚಾರದಲ್ಲಿ ದರ್ಶನ್ ಮಾತ್ರವಲ್ಲ, ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.
ಡಬ್ಬಿಂಗ್ ಸಿನಿಮಾಗಳು ಬರ್ತಿದ್ರೆ ನೇರ ಸಿನಿಮಾಗಳು ಯಾಕೆ ಬೇಕು, ಕನ್ನಡ ಚಲನಚಿತ್ರೋದ್ಯಮಕ್ಕೆ ಮಾರಕ ಕೆಲಸಗಳು ನಡೆಯುತ್ತಿದೆ. ಅವುಗಳಿಂದ ಕನ್ನಡ ಚಿತ್ರರಂಗವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
Laxmi News 24×7