Breaking News

ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

Spread the love

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13, 2021 ರಂದು ತೆರೆಗೆ ಬರ್ತಿದೆ. ಜೂನಿಯರ್ ಎನ್‌ ಟಿ ಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮೇಲೆ ಎಲ್ಲ ಚಿತ್ರರಂಗದ ಕಣ್ಣಿದೆ.

‘ಬಾಹುಬಲಿ’ ಸರಣಿ ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು, ಸ್ವಾತಂತ್ರ್ಯ ವೀರರ ಜೀವನದ ಕಥೆಯನ್ನು ಹೇಳುತ್ತಿದ್ದಾರೆ. ಭಾರಿ ಬಜೆಟ್ ಹಾಗೂ ಅದ್ಧೂರಿ ದೃಶ್ಯ ವೈಭವದೊಂದಿಗೆ ಸಿದ್ಧವಾಗುತ್ತಿರುವ ಸಿನಿಮಾ ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿದೆ.

ಆರ್‌ಆರ್‌ಆರ್ ಸಿನಿಮಾದ ಎದುರು ಯಾವ ಚಿತ್ರವೂ ಬರಲ್ಲ ಎನ್ನುತ್ತಿರುವಾಗಲೇ ಅಜಯ್ ದೇವಗನ್ ಚಿತ್ರ ಅದೇ ವಾರ ಬಿಡುಗಡೆಯಾಗುವುದು ತಿಳಿದು ಬಂದಿದೆ.


Spread the love

About Laxminews 24x7

Check Also

ನ. 22ಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಮರು ಬಿಡುಗಡೆ

Spread the love ಹುಬ್ಬಳ್ಳಿ: ‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಿದ್ಧಪಡಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನವೆಂಬರ್‌ 22ರಂದು ರಾಜ್ಯದಾದ್ಯಂತ ಮರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ