Breaking News

ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ

Spread the love

ಬೆಂಗಳೂರು: ಭಾರತದ 3ನೇ ಅತ್ಯಂತ ದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಪೊಕೊ, ಪೊಕೊ ಸಿ3 ಯ 1 ಮಿಲಿಯನ್‌ (10 ಲಕ್ಷ) ಗೂ ಅಧಿಕ ಯೂನಿಟ್‌ಗಳು ಮಾರಾಟವಾಗಿವೆ.

ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ರೂ.10000ಕ್ಕಿಂತ ಕಡಿಮೆ ಬೆಲೆಯ ದರಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. 6.53 ಇಂಚು ಎಚ್.ಡಿ+ಎಲ್‌ಸಿಡಿ ಡಿಸ್ ಪ್ಲೇ, ಹೀಲಿಯೊ ಜಿ35 ಚಿಪ್‌ಸೆಟ್, 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮಾಡಲ್‍ ಹಣಕ್ಕೆ ತಕ್ಕ ಮೌಲ್ಯ ಒದಗಿಸುತ್ತದೆ. ಇದು 13ಎಂಪಿ ತ್ರಿವಳಿ ಕ್ಯಾಮರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಉತ್ತಮ ಫೋನ್‍ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದ ಪೊಕೊ ಸಿ3 ದೇಶದಲ್ಲಿ ಆನ್‌ಲೈನ್‌ನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಟಾಪ್ 3 ಫೋನ್‌ಗಳ ಪಟ್ಟಿಯಲ್ಲಿ ಸೇರಿದೆ.

ಇದರ ನಿಯಮಿತ ಮಾರಾಟ ಬೆಲೆ ರೂ.8,499 (4/64ಜಿಬಿ) ಮತ್ತು ರೂ.7,499 (3/32ಜಿಬಿ). ಪ್ರಸ್ತುತ ವಿಶೇಷ ರಿಯಾಯಿತಿ ಬೆಲೆ ರೂ.7,999 ಮತ್ತು ರೂ.6,999ಗಳಿಗೆ ದೊರೆಯುವುದಲ್ಲದೆ, ಇದರ ಜೊತೆಗೆ ಎಚ್‍ಡಿಎಫ್‍ಸಿ ಕ್ರೆಡಿಟ್‍ ಅಥವಾ ಡೆಬಿಟ್‍ ಕಾರ್ಡಿಗೆ ಶೇ. 10ರಷ್ಟು ರಿಯಾಯಿತಿ ಸಹ ಲಭ್ಯವಿದೆ.

ಈ ಕಾರ್ಡ್ ರಿಯಾಯಿತಿ ಸೇರಿದರೆ ಪೊಕೊ ಸಿ3ಯ 3ಜಿಬಿ/32ಜಿ ಆವೃತ್ತಿಯನ್ನು ರೂ.6,2999 ಗೆ ಮತ್ತು 4ಜಿಬಿ/64ಜಿಬಿ ಆವೃತ್ತಿಯನ್ನು ಅನ್ನು ರೂ.7,199ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಈ ಆಫರ್‍ ಜನವರಿ 24ರವರೆಗೆ ಲಭ್ಯವಿದೆ


Spread the love

About Laxminews 24x7

Check Also

ಬೆಳಗಾವಿ ಜಿಲ್ಲಾಧಿಕಾರಿ ಕಾರಿಗೆ (ಕಾಂಕ್ರೀಟ್ ಮಷಿನ್ ವಾಹನ)ಡಿಕ್ಕಿ.

Spread the loveಬೆಳಗಾವಿ ಜಿಲ್ಲಾಧಿಕಾರಿ ಕಾರಿಗೆ (ಕಾಂಕ್ರೀಟ್ ಮಷಿನ್ ವಾಹನ)ಡಿಕ್ಕಿ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಘಟನೆ. ಜಿಲ್ಲಾಧಿಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ