Breaking News

ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್

Spread the love

ವೈದ್ಯರಿಗೂ ಸಿನಿಮಾಕ್ಕೂ ಎತ್ತಣಿಂದೆತ್ತ ಸಂಬಂಧ?! ಎನ್ನುವಂತಿಲ್ಲ, ಏಕೆಂದರೆ ವೈದ್ಯರಿಬ್ಬರು ಸೇರಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟರಲ್ಲೊಬ್ಬರಾದ ಗಣೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

25 ವರ್ಷ ವೈದ್ಯೆಯಾಗಿ ಸೇವೆ ಸಲ್ಲಿಸಿರುವ ಶಶಿಕಲಾ ಪುಟ್ಟಸ್ವಾಮಿ ನಿರ್ದೇಶಿಸುತ್ತಿರುವ ಮತ್ತೊಬ್ಬ ವೈದ್ಯ ಶೈಲೇಶ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರದ್ದು ವೈದ್ಯನ ಪಾತ್ರ.

25 ವರ್ಷಗಳ ಹಿಂದೆ ಶಶಿಕಲಾ ಹಾಗೂ ಶೈಲೇಶ್ ಒಟ್ಟಿಗೆ ವೈದ್ಯಕೀಯ ಶಿಕ್ಷಣವನ್ನು ಪಡೆದವರು. ಈಗ 25 ವರ್ಷಗಳ ನಂತರ ಒಟ್ಟಿಗೆ ಸೇರಿ ವೈದ್ಯ ವೃತ್ತಿಯ ಬಗ್ಗೆ ಸಿನಿಮಾ ಮಾಡಲು, ತಮ್ಮ ವೃತ್ತಿಯ ಘನತೆ, ಕಷ್ಟ-ಸುಖಗಳನ್ನು ಜಗತ್ತಿಗೆ ಸಾರಲು ಹೊರಟಿದ್ದಾರೆ.

ಶಶಿಕಲಾ ಅವರು ವೈದ್ಯ ವೃತ್ತಿಯಲ್ಲಿದ್ದರೂ ಸಹ ಅವರಿಗೆ ಸಾಹಿತ್ಯದ ಬಗ್ಗೆ ವಿಪರೀತ ಆಸಕ್ತಿ. ಹಲವು ಪ್ರಮುಖ ದಿನಪತ್ರಿಕೆಗಳನ್ನು ಅವರ ಲೇಖನಗಳು ಪ್ರಕಟವಾಗಿವೆ. ಜೊತೆಗೆ ಕತೆ, ಕವನ ಬರೆವ ಹವ್ಯಾಸವೂ ಇದೆ. ಇದೇ ಹವ್ಯಾಸದ ಭಾಗವಾಗಿ ವೈದ್ಯನೊಬ್ಬನನ್ನು ಮುಖ್ಯ ಪಾತ್ರವಾಗಿಸಿ ಕತೆ ಬರೆದಿದ್ದು, ಅದನ್ನೇ ಈಗ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಶಶಿಕಲಾ ಇದಕ್ಕೆ ಬೆಂಬಲವಾಗಿ ನಿಲ್ಲುತ್ತಿರುವವರು ವೈದ್ಯ ಶೈಲೇಶ್.

ವೈದ್ಯ ವೃತ್ತಿ ಎನ್ನುವುದು ಗೌರವಯುತವಾದ ವೃತ್ತಿ. ವೃತ್ತಿಯ ಪ್ರಾಮುಖ್ಯತೆಯನ್ನು, ಸಮಾಜಕ್ಕೆ ವೈದ್ಯರ ಕೊಡುಗೆಯನ್ನು ಸಾರುವ ಕೆಲಸ ಈ ಸಿನಿಮಾದಲ್ಲಾಗುತ್ತದೆ. ವೈದ್ಯರಿಗೆ ಎಷ್ಟೋ ವೈಯಕ್ತಿಕ ಸಮಸ್ಯೆ ಇದ್ದರೂ ಅವನ್ನೆಲ್ಲ ಬದಿಗೊತ್ತಿ ಬೇರೊಬ್ಬರ ಒಳಿತಿಗಾಗಿ ಕೆಲಸ ಮಾಡುತ್ತಾರೆ. ಇಂತಹ ವೈದ್ಯರ ಬದುಕು ಎಷ್ಟು ಒತ್ತಡದಲ್ಲಿರುತ್ತದೆ, ಜತೆಗೆ ಅವರ ಮೇಲೆ ಆಗಾಗ ಹಲ್ಲೆಗಳಾಗುತ್ತಿರುತ್ತವೆ. ಇವೆಲ್ಲ ಯಾಕೆ ಎಂಬುದರ ಬಗ್ಗೆಯೂ ಈ ಸಿನಿಮಾದಲ್ಲಿ ಚರ್ಚೆಯಾಗುತ್ತದೆ ಎಂದಿದ್ದಾರೆ ಶಶಿಕಲಾ.

ಸಿನಿಮಾ ನಿರ್ದೇಶನದ ಅನುಭವ ಗಳಿಸಲೆಂದು ಶಶಿಕಲಾ ಅವರು ‘ತಲ್ವಾರ್ ಪೇಟೆ’ ಹೆಸರಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಶೈಲೇಶ್ ಅವರೇ ನಿರ್ಮಿಸುತ್ತಿದ್ದಾರೆ.

ಈಗಾಗಲೇ ಕತೆಯನ್ನು ಗಣೇಶ್ ಅವರಿಗೆ ಹೇಳಿದ್ದು, ಗಣೇಶ್ ಅವರು ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಗಣೇಶ್ ಅವರು ಈ ಹಿಂದೆ ‘ಚಮಕ್’ ಸಿನಿಮಾದಲ್ಲಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ