Breaking News

ನಿನ್ನೆ ಪರೀಕ್ಷೆಗೊಳಪಟ್ಟವರ ಪೈಕಿ 9 2ಜನರಿಗೆ ಕೊರೋನಾ ಸೋಂಕು

Spread the love

ಬೆಳಗಾವಿ – ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡುವ ಮುನ್ನವೇ ಬೆಳಗಾವಿ ಜಿಲ್ಲೆಯ ಕೊರೋನಾ ಸೋಂಕಿತರ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದರ ಪ್ರಕಾರ ನಿನ್ನೆ ಪರೀಕ್ಷೆಗೊಳಪಟ್ಟವರ ಪೈಕಿ 92ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಇದು ಈವರೆಗಿನ ಎಲ್ಲ ದಾಖಲೆಗಳನ್ನು ಹೊಸಕಿ ಹಾಕಿದ್ದು, ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪಟ್ಟಿಯಲ್ಲಿ ಸೋಂಕಿತರ ಹೆಸರು, ವಿಳಾಸ, ಸಂಪರ್ಕ ಸಂಖೆಯ ಎಲ್ಲವೂ ನಮೂದಾಗಿದ್ದು, ಎಲ್ಲ ನಿಯಮಗಳನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ.

https://youtu.be/B9KE2v3hacw

ಈ ಪಟ್ಟಿ ಪ್ರಕಾರ ರಾಯಬಾಗ 15, ಹುಕ್ಕೇರಿ 3, ಸವದತ್ತಿ 2, ರಾಮದುರ್ಗ 10, ಚಿಕ್ಕೋಡಿ 8, ಬೈಲಹೊಂಗಲ 2, ಅಥಣಿ 39 , ಬೆಳಗಾವಿ 10, ಖಾನಾಪುರ 2, ಗೋಕಾಕ 1 ಪ್ರಕರಣ ಇಂದು ದೃಢಪಟ್ಟಿದೆ.

ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟಿನ್ ಇನ್ನು ಕೆಲವೇ ಹೊತ್ತಿನಲ್ಲಿ ಬರಲಿದ್ದು, ಅದರಲ್ಲಿ ಈ ಪಟ್ಟಿಗೆ ಅಧಿಕೃತ ಮುದ್ರೆ ಒತ್ತಬೇಕಿದೆ.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ