ಚೆನ್ನೈ: ರಾಜಕಾರಣಿಯಾಗಿ ಬದಲಾದ ನಟ ಕಮಲ್ ಹಾಸನ್ ಸ್ಥಾಪಿಸಿದ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮಯ್ಯಂಗೆ ಭಾರತ ಚುನಾವಣಾ ಆಯೋಗ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಿದೆ.
ಕಮಲ್ ಹಾಸನ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿ, ಎಲ್ಲಾ 234 ಕ್ಷೇತ್ರಗಳಲ್ಲಿ ಟಾರ್ಚ್ ಲೈಟ್ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಲಾಗಿದೆ ಎಂದು ಘೋಷಿಸಿದ್ದಾರೆ.
“ಎಂಎನ್‌ಎಂ ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆಯನ್ನು ನೀಡಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಜನ್ಮದಿನದಂದು ಈ ಚಿಹ್ನೆಯನ್ನು ಪಡೆದಿರುವುದುಸಂತೋಷವಾಗಿದೆ ಎಂದು ಅವರು ಹೇಳಿದರು. “ಭಾರತದ ಚುನಾವಣಾ ಆಯೋಗ ಮತ್ತು ನನ್ನ ಪರವಾಗಿ ನಿಂತವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ” ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗ 2019 ರಲ್ಲಿ ಲೋಕಸಭೆ ಚುನಾವಣೆಯ ವೇಳೆ ಎಂ.ಎನ್.ಎಂ. ಪಕ್ಷಕ್ಕೆ ಟಾರ್ಚ್ ಲೈಟ್ ಚಿಹ್ನೆ ನೀಡಿತ್ತು. ಆದರೆ ತಮಿಳು ನಾಡಿನ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಈ ಚಿಹ್ನೆಯನ್ನು ಆಯೋಗ ಮತ್ತೊಂದು ಪಕ್ಷಕ್ಕೆ ನೀಡಿತ್ತು. ಇದನ್ನು ಪ್ರಶ್ನಿಸಿ ಟರ್ಚ್ ಲೈಟ್ ಚಿಹ್ನೆಗಾಗಿ ಕಮಲ್ ಃಆಸನ್ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು,
Laxmi News 24×7