Breaking News

7ನೇ ಬಾರಿ ಕೇಂದ್ರ – ರೈತರ ಜೊತೆಗಿನ ಸಭೆ ವಿಫಲ

Spread the love

ನವದೆಹಲಿ : ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಮಸೂಧೆ ವಿರೋಧಿಸಿ ನಡೆಯುತ್ತಿರುವಂತ ಪ್ರತಿಭಟನಾ ನಿರತ ರೈತರೊಂದಿಗೆ, ಕೇಂದ್ರ ಸರ್ಕಾರ ಇಂದು 7ನೇ ಬಾರಿ ನಡೆಸಿದಂತ ಸಭೆ ನಡೆಸಿತು. ಇಂತಹ ಸಭೆಯಲ್ಲಿ ರೈತ ಮಸೂಧೆಗಳ ಮಾರ್ಪಾಡಿಗೆ ಒಪ್ಪಿದಂತ ಕೇಂದ್ರ ಸರ್ಕಾರ, ಮಸೂದೆಗಳನ್ನೇ ರದ್ದು ಪಡಿಸಲು ಒಪ್ಪದ ಹಿನ್ನಲೆಯಲ್ಲಿ, ಇಂದು ನಡೆದ ಸಭೆ ಕೂಡ ವಿಫಲವಾಗಿದೆ.

ಇಂದು ಕೇಂದ್ರ – ರೈತರ ಮುಖಂಡರ ಏಳನೇ ಸುತ್ತಿನ ಮಾತುಕತೆಯಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಸರಕಾರವು ನಿರಾಕರಿಸಿದ್ದು, 41 ಕೃಷಿ ಕಾರ್ಮಿಕ ಸಂಘಟನೆಗಳ ಮುಖಂಡರ ನಿಯೋಗವು ಈ ಕಾಯಿದೆಯಲ್ಲಿ ಆಕ್ಷೇಪ ವ್ಯಕ್ತ ಪಡಿಸಿವೆ. ಅಲ್ಲದೇ ಕಾಯ್ದೆಗಳ ರದ್ದಿಗೂ ಒತ್ತಾಯಿಸಿವೆ.

ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪೀಯೂಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಅವರ ಪ್ರತಿನಿಧಿಯಾಗಿರುವ ಸರ್ಕಾರ, ರೈತರ ಸಮಸ್ಯೆ ಇರುವ ಯಾವುದೇ ಷರತ್ತುಗಳನ್ನು ಸರ್ಕಾರ ಪರಾಮರ್ಶಿಸಲಿದೆ ಎಂದು ತಿಳಿಸಿದರು.

ಮೂರು ಕೃಷಿ ಕಾಯ್ದೆಗಳ ಮಾರ್ಪಾಡಿಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರ, ಕಾಯ್ದೆಗಳನ್ನೇ ರದ್ದುಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ರೈತರು-ಕೇಂದ್ರ ಸರ್ಕಾರದ ನಡುವೆ ನಡೆದಂತ ಮಾತುಕತೆ ಸಭೆ ವಿಫಲವಾಗಿದೆ. ಈ ಮೂಲಕ ಮತ್ತೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರೆಸಲಿದ್ದಾರೆ.


Spread the love

About Laxminews 24x7

Check Also

ಅರಣ್ಯ ಇಲಾಖೆಯ ಅನುಮತಿ ಪಡೆಯದೇ 50 ಎಕರೆ ಜಾಗದಲ್ಲಿದ್ದ ಮರಗಳನ್ನು ಕಡಿದು ಹಾಕಲಾಗಿದೆ

Spread the loveಬೆಳಗಾವಿ: ಅರಣ್ಯ ಇಲಾಖೆಯ ಅನುಮತಿ ಪಡೆಯದೇ 50 ಎಕರೆ ಜಾಗದಲ್ಲಿದ್ದ ಮರಗಳನ್ನು ನಾಶಪಡಿಸಲಾಗಿದೆ ಎಂದು ಬೆಳಗಾವಿ ತಾಲೂಕಿನ ಬಡಾಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ