Breaking News

ಲಿಫ್ಟ್‍ನಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಡದ ರಕ್ಷಣಾ ಸಿಬ್ಬಂದಿ

Spread the love

ಶಿವಮೊಗ್ಗ, – ಲಿಫ್ಟ್‍ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೋಗುವಾಗ ಅವರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಹೋಗಲು ಗನ್‍ಮ್ಯಾನ್‍ಗಳು ಅವಕಾಶ ನೀಡದ ಪ್ರಸಂಗ ನಡೆಯಿತು.

ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಹೊರಟರು. ಆಗ ಅವರು ಹತ್ತಿದ ಲಿಫ್ಟ್‍ನಲ್ಲೇ ಜಗದೀಶ್ ಶೆಟ್ಟರ್ ಹತ್ತಲು ಹೋದಾಗ ಅವರನ್ನು ಗನ್‍ಮ್ಯಾನ್‍ಗಳು ತಡೆದರು.

ಆದರೆ, ಸಿಎಂ ಜತೆ ಲಿಫ್ಟ್ ಒಳಗೆ ಶಿವಮೊಗ್ಗ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ರಾಘವೇಂದ್ರ ಬಂದರು. ರಿಲ್ಯಾಕ್ಸ್ ಆಗಲು ಕೊಠಡಿಗೆ ತೆರಳಲು ಲಿಫ್ಟ್ ಬಳಿ ಜಗದೀಶ್ ಶೆಟ್ಟರ್ ಬಂದಿದ್ದರು. ಸಿಎಂ ಯಡಿಯೂರಪ್ಪ ಅವರು ಬಂದಿದ್ದನ್ನು ನೋಡಿ ಅವರಿಗೆ ಶೆಟ್ಟರ್ ಜಾಗ ಮಾಡಿಕೊಟ್ಟರು.

ಕಡೆಗೆ ಶೆಟ್ಟರ್‍ಗೆ ಲಿಫ್ಟ್ ಒಳಗೆ ಬರಲು ಗನ್‍ಮ್ಯಾನ್‍ಗಳು ನಿರಾಕರಿಸಿದ್ದರಿಂದ ಅವರು ಬೇರೆ ಲಿಫ್ಟ್ ಹತ್ತಬೇಕಾಯಿತು


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ