ಜಮಖಂಡಿ: ಭ್ರಷ್ಟಚಾರ ವಿರೋಧಿಸಿ ನಗರದ ಸಹಾಯಕ ಪ್ರದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ವ್ಯಕ್ತಿಯೊಬ್ಬ ಅಧಿಕಾರಿಗಳು ಕುಳಿತುಕೊಳ್ಳುವ ಕುರ್ಚಿ ಕಾಲಿಗೆ ಪಾದ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಬುಧವಾರ ನಡೆದಿದೆ.
ನಗರದ ಆರ್ಟಿಒ ಕಚೇರಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಸಂತೋಷ ಚನಾಳ ಎಂಬಾತ ಹಲವು ಬಾರಿ ಪ್ರತಿಭಟನೆ ನಡೆಸಿದ್ದ, ಆತನ ಹೋರಾಟಕ್ಕೆ ಫಲ ಸಿಗದರಿಂದ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದಿದ್ದಾನೆ.
ಬೈಕ್ ಶೋರೂಮ್ಗಳಲ್ಲಿ ತಾತ್ಕಾಲಿಕ ನೀಡುವ ಪರವಾನಿಗೆಗೆ ಸರ್ಕಾರದಿಂದ 160 ರೂ.ಶುಲ್ಕ. ಇದೆ. ಆದ್ರೆ ಶೋರೂಮ್ ಇದಕ್ಕೆ 1,050 ರೂಪಾಯಿ ಪಡೆದುಕೊಳ್ಳುತ್ತಿದೆ. ಪ್ರಾದೇಶಿಕ ಸಹಾಯಕ ಸಾರಿಗೆ ಇಲಾಖೆಯ ಅಧಿಕಾರಿ ಸೇರಿ ಸಿಬ್ಬಂದಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಅಂತಾ ಸಂತೋಷ ಆರೋಪಿಸಿದ್ದಾರೆ.
ಇಂದು ಅಧಿಕಾರಿ ಗೈರಾಗಿದ್ದ ಹಿನ್ನೆಲೆ. ಅಧಿಕಾರಿ ಕುಳಿತುಕೊಳ್ಳುವ ಕುರ್ಚಿಗೆ ವಿಶೇಷ ರೀತಿಯ ಪಾದಪೂಜೆ ಮಾಡಿ ಭ್ರಷ್ಟಾಚಾರದ ವಿರುದ್ದ ಪ್ರತಿಭಟನೆ ನಡೆಸಿ ಸಂತೋಷ ಗಮನ ಸೆಳೆದಿದ್ದಾರೆ.