ಗೋಕಾಕ 31: ಗೋಕಾಕ ನಗರದ ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಹರಿಯುತ್ತಿರುವ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮದ ಪವಿತ್ರ ಸ್ಥಳವನ್ನು ಅಭಿವೃದ್ಧಿ ಪಡಿಸಲು ಸರಕಾರವನ್ನು ಆಗ್ರಹಿಸಲಾಯಿತು.
ಈ ಕುರಿತು ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಇಂದು ನಡೆದ ನಾಗರೀಕರ ಸಭೆಯಲ್ಲಿ ಈ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಗ್ಲಾö್ಯಕ್ಸೋ ಪ್ಯಾಕ್ಟರಿ ಮತ್ತು ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದ ನಡುವೆ ಇರುವ ಸರಕಾರಿ ಹಾದಿಯನ್ನು ಅಭಿವೃದ್ಧಿ ಪಡಿಸಿ ನದಿಯಲ್ಲಿ ಬ್ರಿಜ್ಡ ಕಂ ಬ್ಯಾರೇಜ್ ನಿರ್ಮಿಸಬೇಕು ಹಾಗೂ ನದಿಗಳ ಸಂಗಮ ಸ್ಥಳದಲ್ಲಿ ಅರ್ಧ ಕಿಲೋ ಮೀಟರ ಉದ್ದ ಘಾಟ್ ನಿರ್ಮಿಸುವ ಮೂಲಕ ಪವಿತ್ರ ನದಿಯಲ್ಲಿ ಸ್ಥಾನ ಮಾಡುವ ಸದ್ಬಕ್ತರಿಗೆ ಅನುಕೂಲ ಮಾಡಕೊಡಬೇಕೆಂದು ಸರಕಾರವನ್ನು ವಿನಂತಿಸಿ ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಯವರನ್ನು ಹಾಗೂ ಸ್ಥಳೀಯ ಶಾಸಕರಾದ ರಮೇಶ ಜಾರಕಿಹೊಳಿಯವರನ್ನು ನಿಯೋಗದ ಮೂಲಕ ವಿನಂತಿಸಲು ತೀರ್ಮಾನಿಸಲಾಯಿತು. ಹಾಗೂ ಪ್ರಸಕ್ತ ಸಾಲೀನ ರಾಜ್ಯ ಸರಕಾರದ ಬಜೆಟ್ ಸಂದರ್ಭದಲ್ಲಿಯೇ ಈ ಕುರಿತು ಪ್ರಾವಿಧಾನ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಮುಖ್ಯಮಂತ್ರಿಗಳನ್ನು ಬೇಟಿಯಾಗಲು ಸಹ ಚರ್ಚಿಸಲಾಯಿತು.
ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರ್ಬನ್ ಬ್ಯಾಂಕ ಅಧ್ಯಕ್ಷರಾದ ಬಸವರಾಜ ಕಲ್ಯಾಣಶೆಟ್ಟಿ, ಕೆ.ಎಲ್.ಇ. ನಿರ್ದೇಶಕರಾದ ಜಯಾನಂದ ಮುನವಳಿ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ ಹಾಗೂ ಮುಖಂಡರಾದ ಸೋಮಶೇಖರ ಮಗದುಮ್ಮ ಅವರುಗಳು ಮಾತನಾಡಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಸಂಗಮ ಸ್ಥಳ ತನ್ನದೇ ಆದ ಧಾರ್ಮಿಕ ಮಹತ್ವ ಹೊಂದಿದ್ದು, ಈ ಸ್ಥಳದಲ್ಲಿರುವ ಶ್ರೀ ಕೂಡಲ ಸಂಗಮೇಶ್ವರ ದೇವಸ್ಥಾನವು ಶತಮಾನಗಳ ಇತಿಹಾಸ ಹೊಂದಿದ್ದು, ತನ್ನದೇ ಆದ ಮಹತ್ವ ಹೊಂದಿದೆ. ಸದರೀ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಇದನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವುದರ ಜೊತೆಗೆ ಗೋಕಾಕದ ಅಭಿವೃದ್ಧಿಗೆ ಪೂರಕವಾದ ಚಿಂತನೆ ಇದರಲ್ಲಿದೆ. ಕಾರಣ ಸರಕಾರ ಕೂಡಲೇ ನಮ್ಮ ಬೇಡಿಕೆಯನ್ನು ಇಡೇರಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಸವರಾಜ ಕಲ್ಯಾಣಶೆಟ್ಟಿ ಯವರು ವಹಿಸಿದ್ದರು. ಸಭೆಯಲ್ಲಿ ಮಾಯಪ್ಪ ತಹಶೀಲ್ದಾರ, ರಮೇಶ ಮೂರ್ತೇಲಿ, ಚಂದ್ರಕಾAತ ಕುರಬೇಟ, ಶಿವಾನಂದ ಹೂಲಿ, ವಿಜಯ ಕ್ಯಾಸ್ತಿ, ಬಸವರಾಜ ದೇಶನೂರ, ಅಭಯ ದಿಕ್ಷೀತ, ಸಂಜೀವ ಪೂಜಾರಿ, ಮಲ್ಲಿಕಾರ್ಜುನ ನಂದಗಾAವಿ, ಬಾಳು ಅಂಬಿ, ತುಕ್ಕಪ್ಪ ಮುತ್ನಾಳ, ರಾಜು ಮಠದ, ಸೋಮಯ್ಯ ಹಿರೇಮಠ, ರಾಜು ಮಾಡಲಗಿ, ಶ್ರೀಶೈಲ ಪೂಜಾರಿ, ಮಹೇಶ ಮಠಪತಿ, ವಿನಾಯಕ ಹೊಸಮನಿ, ಅನೀಲ ಹಾಲಭಾಂವಿ, ಚಂದ್ರಪ್ಪ ಮಡಿವಾಳರ, ಅನೀಲ ಸಂಕಾಜಿ, ನಾಗು ದೇಸಾಯಿ, ಮಂಜು ಪೂಜೇರಿ ಮುಂತಾದವರು ಉಪಸ್ಥಿತರಿದ್ದರು.
Laxmi News 24×7