ಸಮಾನತೆ ಮತ್ತು ಸ್ವಾಭಿಮಾನದ ಸಂಕೇತ: ಭೀಮಾ ಕೋರೆಗಾಂವ್ ವಿಜಯೋತ್ಸವ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ‘ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ದಲ್ಲಿ ಇಂದು ಆಯೋಜಿಸಲಾಗಿದ್ದ ಭೀಮಾ ಕೋರೆಗಾಂವ್ ಯುದ್ಧದ ಐತಿಹಾಸಿಕ ವಿಜಯೋತ್ಸವ ಹಾಗೂ ಹೊಸವರ್ಷದ ಸಂಭ್ರಮಾಚರಣೆಯನ್ನು ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ…

1818ರ ಜನವರಿ 1ರಂದು ಸಂಭವಿಸಿದ ಆ ಐತಿಹಾಸಿಕ ವಿಜಯವು ಕೇವಲ ಒಂದು ಯುದ್ಧದ ಗೆಲುವಲ್ಲ; ಅದು ಜಾತಿವಾದದ ವಿರುದ್ಧ ಸ್ವಾಭಿಮಾನದಿಂದ ಗಳಿಸಿದ ಮಹಾನ್ ಜಯ, ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಅಮೂಲ್ಯ ಮೈಲಿಗಲ್ಲು. ಆ ಶೌರ್ಯ ಹಾಗೂ ತ್ಯಾಗದ ಸ್ಮರಣೆಯೊಂದಿಗೆ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಮತ್ತು ಪ್ರೇರಣಾದಾಯಕವಾಗಿ ಬರಮಾಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಈ ಸಂದರ್ಭದಲ್ಲಿ ಪೂಜ್ಯ ಬೋಧಿರತ್ನ ಭಂತೇಜಿ ಅವರು, ಕುಲಪತಿಗಳಾದ ಪ್ರೊ. ಡಾ. ಎಸ್. ಎಂ. ಜಯಕರ ಅವರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Laxmi News 24×7