ಹೆಬ್ಬಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಶ್ರೀ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ ಸಂಘ’ದಿಂದ ಪೆನ್-ನೋಟ್’ಬುಕ್ ವಿತರಣೆ!
ನವಲಗುಂದ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ, ಸಿದ್ದಾರೂಢ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಶಾಲಾ ಮಕ್ಕಳಿಗೆ ಪೆನ್ನು-ನೋಟ್’ಬುಕ್ ವಿತರಿಸುವ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಜರುಗಿದ್ದು, ಅಳಗವಾಡಿಯ ಸಿದ್ದಾರೂಢ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಹಿರಿಯ ಹಾಗೂ ಕಿರಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಮತ್ತು ನೋಟಬುಕ್ ವಿತರಣೆ ಮಾಡಲಾಯಿತು. ಬಳಿಕ ಇದೇ ವೇಳೆ ಮಾತನಾಡಿದ ಸ್ವಾಮೀಜಿಗಳು ಶ್ರೀ ಮಹರ್ಷಿ ವಾಲ್ಮೀಕಿ ಜೀವನದ ಬಗ್ಗೆ ಎಲ್ಲರೂ ತಿಳಿಯಬೇಕು.
ಓದಿನಲ್ಲಿ ಶ್ರದ್ಧೆ ತುಂಬಾ ಮುಖ್ಯ, ವಿದ್ಯಾರ್ಥಿಗಳು ರಾಮಾಯಣ ಗ್ರಂಥವನ್ನು ಓದಿಕೊಂಡು ತಿಳಿದುಕೊಳ್ಳಬೇಕು. ರಾಮಾಯಣದಲ್ಲಿ ಉತ್ತಮ ಜೀವನ ನಡವಳಿಕೆ ಪಾಠಗಳಿವೆ.
ಎಲ್ಲ ವಿದ್ಯಾರ್ಥಿಗಳು ರಾಮಾಯಣ ಜತೆಗೆ ಜೀವನ ಉತ್ತಮಗೊಳಿಸುವ ಗ್ರಂಥಗಳನ್ನು ಓದಬೇಕು. ವಿದ್ಯಾಭ್ಯಾಸದ ಜತೆಗೆ ಆಟದ ಕಡೆಯೂ ಗಮನಹರಿಸಬೇಕು ಎಂದು ತಿಳಿಹೇಳಿದರು.
ಇನ್ನೂ ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಮ್’ಸಿ ಅಧ್ಯಕ್ಷರಾದ ಮೈಲಾರಿ ಬೆಟಗೇರಿ, ಸಾಲೆಯ ಮುಖ್ಯ ಶಿಕ್ಷರು ಸಿಬ್ಬಂದಿ, ಶ್ರೀ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಕಾಂತ್ ಹುಲಿಗೆಪ್ಪನವರ, ಉಪಾಧ್ಯಕ್ಷ ಬಸಪ್ಪ ಕೊಪ್ಪದ, ಕಾರ್ಯದರ್ಶಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7