Breaking News

ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗೆ ಡಿಸೆಂಬರ್ 8 ರಿಂದ ಬೃಹತ್ ಹೋರಾಟ: ಬೇಡಿಕೆ ಈಡೇರದಿದ್ದರೆ ‘ಕಿತ್ತೂರು ಕರ್ನಾಟಕ’ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ!

Spread the love

ಚಿಕ್ಕೋಡಿಗೆ ಪ್ರತ್ಯೇಕ ಜಿಲ್ಲೆ; ಉಗ್ರ ಹೋರಾಟ ನಿಶ್ಚಿತ
ಬೇಡಿಕೆ ಇಡೇರಿಸದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ
ಅಧಿವೇಶನದಲ್ಲಿ ಶಾಸಕರು ಸರ್ಕಾರಕ್ಕೆ ಒತ್ತಾಯಿಸಲಿ: ಸ್ವಾಮೀಜಿ
ಡಿಸೆಂಬರ್ 8 ರಿಂದ ಬೃಹತ್ ಚಳುವಳಿ ಆರಂಭ
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸಿ ಬರುವ ಡಿಸೆಂಬರ್ 8 ರಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಕುರಿತು ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯ ಎಲ್ಲ ಶಾಸಕರು ಸದನದಲ್ಲಿ ಸರ್ಕಾರಕ್ಕೆ ಒತ್ತಾಯಿಸಬೇಕು, ಇಲ್ಲ ಅಂದರೆ ಕಿತ್ತೂರ ಕರ್ನಾಟಕ ರಾಜ್ಯ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ ಮಾಡುತ್ತೇವೆ ಎಂದು ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮೀಜಿ ಹೇಳಿದರು.
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅನೇಕ ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆದಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಜಿಲ್ಲೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇವಾಗ ಅಧಿವೇಶನದಲ್ಲಿ ಘೋಷನೆ ಆಗ್ಬೇಕು.
ಅದೇ ರೀತಿ ಈ ಕುರಿತು ಚಿಕ್ಕೋಡಿ ಜಿಲ್ಲೆಯ ಎಲ್ಲ ಸ್ವಾಮೀಜಿಗಳು ಹಾಗೂ ಜಿಲ್ಲಾ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ಅಗಲಿದ್ದೇವೆ. ಜಿಲ್ಲೆ ರಚನೆ ಆದರೆ ಅಥಣಿ ಸೇರಿದಂತೆ ಗಡಿ ಭಾಗದ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಇದ್ದೇವಿ. ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರ ಅಶ್ವಾಸನೆ ನೀಡುತ್ತದೆ. ಅಧಿವೇಶನ ಹಿನ್ನೆಲೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕೇಂದ್ರ ಸರಕಾರದ ಸೂಚನೆಗೆ ಅನುಸಾರ 31 ಡಿಸೆಂಬರ ಒಳಗೆ ಹೊಸ ಜಿಲ್ಲೆಗಳ ರಚನೆ ಮಾಡಬೇಕಾಗಿದೆ. ಹೀಗಾಗಿ ಸರ್ಕಾರ ತಕ್ಷಣ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕು. ಬರುವ ಡಿಸೆಂಬರ 8ರಂದು ಚಿಕ್ಕೋಡಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ ಪೂಜಾರಿ, ಶಂಕರ್ ಅವಾಡಖಾನ ರುದ್ರಯ್ಯ ಹಿರೇಮಠ್, ದುರದುಂಡಿ ಬಡಿಗೇರ್, ಕಣಪ್ಪ ಬಾಡಕರ, ಅಜ್ಜಪ್ಪ ವಗ್ಗೆ, ಅನಿಲ ನಾವಿ, ಪ್ರತಾಪ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿದ ಚಾಲಕ,

Spread the loveಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮನ ಮಿಡಿಯುವ ಘಟನೆ ನಡೆದಿದೆ. ಆಂಬ್ಯುಲೆನ್ಸ್​ ಚಾಲಕ ಮಾಡಿರುವ ಕೆಲಸಕ್ಕೆ ಸಾರ್ವಜನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ