Breaking News

ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ

Spread the love

ಪಿಐಟಿ-ಎನ್‌ಡಿಪಿಎಸ್ ಕಾಯ್ದೆ
ಕುಖ್ಯಾತ ಅಪರಾಧಿ ಸಲೀಂ ಸೌದಾಗರ ಬಂಧನ
ಕರ್ನಾಟಕದಲ್ಲಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಅಡಿ ಮೊದಲ ಬಂಧನ!
37 ಪ್ರಕರಣಗಳ ಆರೋಪಿ
ಕೊಲೆ, ಸುಲಿಗೆ, ಡಕಾಯಿತಿ ಸೇರಿದಂತೆ ಘೋರ ಅಪರಾಧಗಳು.
ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕ್ರಿಮಿನಲ್ ಕೃತ್ಯ
ಪೊಲೀಸ್ ಕಮೀಷನರೇಟ್, ಬೆಳಗಾವಿ ನಗರ ಸೃಜಿಸಿದ ನಂತರ ಇದೇ ಮೊದಲ ಬಾರಿಗೆ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ-1988 ರ ಅಡಿಯಲ್ಲಿ ಕುಖ್ಯಾತ ಅಪರಾಧಿ ಸಲೀಂ @ ಅಂದಾಸಲೀಂ ಸೌದಾಗರನನ್ನು ಬಂಧಿಸಲಾಗಿದೆ.
ಆರೋಪಿ ಸಲೀಂ ಕಮರುದ್ದೀನ್ ಸೌದಾಗರನು ಕೇವಲ 12 ಎನ್‌ಡಿಪಿಎಸ್ (NDPS) ಕಾಯ್ದೆ ಪ್ರಕರಣಗಳಲ್ಲಿ ಮಾತ್ರವಲ್ಲದೆ, ಕೊಲೆ, ಕೊಲೆಗೆ ಯತ್ನ, ಸುಲಿಗೆ, ಡಕಾಯತಿ, ಮನೆಗಳ್ಳತನ ಮತ್ತು ಸಾಕ್ಷಿದಾರರನ್ನು ಹೆದರಿಸುವುದು ಸೇರಿದಂತೆ ಘೋರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ರೂಢಿಗತ ಅಪರಾಧಿಯಾಗಿದ್ದಾನೆ. ಈತನ ವಿರುದ್ಧ ಒಟ್ಟು 37 ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ಈತನು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಸಹ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅಂತರರಾಜ್ಯ ಆರೋಪಿಯಾಗಿದ್ದಾನೆ. ಈತನ ಅಪರಾಧಿಕ
ಹಿನ್ನೆಲೆಯನ್ನು ಪರಿಗಣಿಸಿ, ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯ ಕಲಂ 3(1) ರ ಅಡಿಯಲ್ಲಿ ಬಂಧನ ಆದೇಶ ಹೊರಡಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಕ್ಷಮ ಪ್ರಾಧಿಕಾರವು, ಕರ್ನಾಟಕ ಸರ್ಕಾರದ ಆದೇಶದಂತೆ, ಕೇಂದ್ರ ಕಾರಾಗೃಹ, ಬೆಳಗಾವಿಯಲ್ಲಿ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಕಾಯ್ದೆಯಡಿ ಜಾರಿಗೊಂಡ ಮೊದಲ ಆದೇಶ ಇದಾಗಿದೆ.

Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ