ಬೆಳಗಾವಿ- ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಿಸಲು ನೂತನ ಕ್ಯಾಲೇಂಡರ್ ವಿತರಿಸಿದ ರಮೇಶ ಜಾರಕಿಹೊಳಿ
ಪೃಥ್ವಿ ಫೌಂಡೇಶನ್ ವತಿಯಿಂದ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕೊರೊನಾ ವಾರಿಯರ್ಸ್‍ಗೆ ಸತ್ಕಾರ ಮಾಡಿ ಬಳಿಕ ತಮ್ಮ ಭಾವಚಿತ್ರದ ಹೊಸ ವರ್ಷದ ಕ್ಯಾಲೇಂಡರ್‍ನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಪೃಥ್ವಿ ಸಿಂಗ್ ಮಾತನಾಡಿ ಸುಮಾರು 10 ಸಾವಿರ ಕ್ಯಾಲೇಂಡರ್‍ಗಳನ್ನು ಗ್ರಾಮೀಣ ಕ್ಷೇತ್ರದಲ್ಲಿ ವಿತರಿಸುತ್ತಿದ್ದೇವೆ. ಅದೇ ರೀತಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ರಮೇಶ ಜಾರಕಿಹೊಳಿ ಅವರ ಕನಸನ್ನು ನನಸಾಗಿಸಲು ನಾವು ಶ್ರಮಿಸುತ್ತೇವೆ ಎಂದು ಹೇಳಿದರು.
ಬಳಿಕ ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಶ್ರಮವಹಿಸಿದ ಹೆಲ್ಫ್ ಫಾರ್ ನೀಡಿ ಸಂಘಟನೆಯ ಮಾಧುರಿ ಜಾಧವ್, ದಲಿತ ಮುಖಂಡ ಮಲ್ಲೇಶ ಚೌಗುಲೆ, ಆನಂದ ಶಿರೂರ, ರಫೀಕ್ ಶೇಖ್ ಸೇರಿದಂತೆ ಇನ್ನಿತರ ಸಂಘಟನೆಯ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಮುಖಂಡರಾದ ಶಿವಾಜಿ ಸುಂಠಕರ್, ವಿನಯ್ ಕದಂ, ವಿಜಯಾ ಹಿರೇಮಠ ಈ ವೇಳೆ ಉಪಸ್ಥಿತರಿದ್ದರು.
Laxmi News 24×7