Breaking News

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ಚಿಗುರು ಕಾರ್ಯಕ್ರಮ

Spread the love

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ಚಿಗುರು ಕಾರ್ಯಕ್ರಮ -2020 ನ್ನು ಆಯೋಜಿಸಲಾಗಿತ್ತು.

ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಚಿಣ್ಣರ ಹಬ್ಬವನ್ನು ಬಸವರಾಜ ಕಟ್ಟಿಮನಿ ಸಭಾಗೃಹದಲ್ಲಿ ಆಯೋಜನೆ ಮಾಡಲಾಗಿತ್ತು.

ವೇದಿಕೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ,ಉತ್ತರ ವಿಭಾಗದ ಶಾಸಕ ಅನಿಲ ಬೆನಕೆ, ವೇಣುಧ್ವನಿ ಬಾನುಲಿಯ ಸುನಿತಾ ದೇಸಾಯಿ,ಪತ್ರಕರ್ತ್ ಮಹೇಶ ವಿಜಾಪುರ & ಗಣ್ಯರು ಆಸಿನರಾಗಿದ್ದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಮಕ್ಕಳು ವಿದ್ಯೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

ಈ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ,ಗಾಯನ ಸ್ಪರ್ಧೆ,ಏಕ ಪಾತ್ರಾಭಿನಯ,ಭರತ್ ನಾಟ್ಯ ಕಾರ್ಯಕ್ರಮಗಳು ಜರುಗಿದವು.

ಈ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ