Breaking News

ನೇಕಾರರ ಪರ ನಿಂತ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ 2025-30ರ ನೂತನ ಜವಳಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ

Spread the love

ನೇಕಾರರ ಪರ ನಿಂತ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ
2025-30ರ ನೂತನ ಜವಳಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ
ನೇಕಾರರ ಪರ ನಿಂತ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ
2025-30ರ ನೂತನ ಜವಳಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ
ಹೊಸ ಜವಳಿ ನೀತಿ: 2025-30ರ ನೀತಿ ಜಾರಿಗೆ ಸಿದ್ಧತೆ
ನೇಕಾರರಿಗೆ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ
ರಾಜ್ಯದಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ ನೀಡಲು ಮತ್ತು ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರವು 2025-30ರ ನೂತನ ಜವಳಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ನೇಕಾರರ ಪರವಾಗಿ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
ನೂತನ ಜವಳಿ ನೀತಿ ರೂಪಿಸುವ ಸಭೆಗಳಿಗೆ ನೇಕಾರರು ಹೆಚ್ಚಿರುವ ಪ್ರದೇಶಗಳ ವಿಧಾನಸಭಾ ಸದಸ್ಯರನ್ನು ಆಹ್ವಾನಿಸಿ, ಅವರ ಸಲಹೆಗಳನ್ನು ಪಡೆಯಬೇಕು. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ, ನೇಕಾರರನ್ನು ಅಸಂಘಟಿತ ವಲಯವೆಂದು ಪರಿಗಣಿಸಿ, ಜವಳಿ ಘಟಕಗಳಿಂದ ಸೆಸ್ ಸಂಗ್ರಹಿಸಿ ಶಿಕ್ಷಣ, ಆರೋಗ್ಯ, ಮತ್ತು ಅಪಘಾತ ವಿಮಾ ನಿಧಿ ಮುಂತಾದ ಸೌಲಭ್ಯಗಳನ್ನು ಒದಗಿಸಲು ಪ್ರತ್ಯೇಕ ಮಂಡಳಿ ರಚಿಸಬೇಕು. ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಹಾಯಧನ ಪಡೆದ ನೇಕಾರರಿಗೆ ಅದೇ ದಾಖಲೆಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರದ ಯೋಜನೆಗಳಿಗೂ ಸಹಾಯಧನ ನೀಡುವ ಸೌಲಭ್ಯವನ್ನು ಮುಂದುವರಿಸಬೇಕು. ₹1 ಕೋಟಿಯಿಂದ ₹2 ಕೋಟಿವರೆಗೆ ಜವಳಿ ಘಟಕ ಸ್ಥಾಪನೆಗೆ ಜಿಲ್ಲಾ ಮಟ್ಟದ ಅನುಮೋದನೆ ಸಮಿತಿಗೆ (DOAC) ಅಧಿಕಾರ ಹೆಚ್ಚಿಸಬೇಕು. ಅಲ್ಲದೆ, ನೇಕಾರಿಕೆ ಉದ್ಯಮಗಳಿಗೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಕೋಸ್ಟಿಕ್ ತಂತ್ರಜ್ಞಾನಕ್ಕೆ ಶೇ.90ರಷ್ಟು ಸಹಾಯಧನ ಮತ್ತು ಪರಿಸರ ಮಾಲಿನ್ಯ ಇಲಾಖೆ ಪರವಾನಗಿಯಿಂದ ವಿನಾಯಿತಿ ನೀಡಬೇಕು.
ಜವಳಿ ಪಾರ್ಕ್‌ಗಳಿಗೆ ಅಗತ್ಯವಿರುವ ಭೂಮಿಯ ಪ್ರಮಾಣವನ್ನು 15 ಎಕರೆಯಿಂದ 5 ಎಕರೆಗೆ ಇಳಿಸಬೇಕು. ಯಂತ್ರೋಪಕರಣಗಳಿಗೆ ಪ್ರತ್ಯೇಕವಾಗಿ ಶೇ. 75 ರಷ್ಟು ಸಹಾಯಧನ ನೀಡಬೇಕು. ಅಲ್ಲದೆ, ಸಣ್ಣ ಮತ್ತು ಅತಿಸಣ್ಣ ನೇಕಾರರಿಗೆ ಪರವಾನಗಿ, ಅಗ್ನಿಶಾಮಕ ಇಲಾಖೆ ವರದಿ ಮುಂತಾದ ಅನಗತ್ಯ ನಿಯಮಗಳಿಂದ ವಿನಾಯಿತಿ ನೀಡಬೇಕು. ಬೆಳಗಾವಿ ದಕ್ಷಿಣದಲ್ಲಿ ಜವಳಿ ಸಂಶೋಧನಾ ಕೇಂದ್ರ ಸ್ಥಾಪನೆ,
ಹಾಗು ವಿದ್ಯುತ್ ಮಗ್ಗ ಸೇವಾ ಕೇಂದ್ರದಲ್ಲಿ ಹೈಟೆಕ್ ತರಬೇತಿ ನೀಡುವ ಸೌಲಭ್ಯ ಒದಗಿಸಬೇಕು. ನೇಕಾರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯಲು ಸರ್ಕಾರ ವಿಶೇಷ ಯೋಜನೆ ರೂಪಿಸಿ ಜಾರಿಗೆ ತರಬೇಕು. ನೇಕಾರರು ₹100-200ರ ಛಾಪಾ ಕಾಗದಗಳ ಮೇಲೆ ಖರೀದಿಸಿದ ನಿವೇಶನಗಳನ್ನು ಸಕ್ರಮಗೊಳಿಸಿ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು. ನೇಕಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಜವಳಿ ನೀತಿ ರೂಪಿಸುವಂತೆ ಶಾಸಕ ಅಭಯ ಪಾಟೀಲ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Spread the love

About Laxminews 24x7

Check Also

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ಸಂಬಂಧ ಸುಗ್ರೀವಾಜ್ಞೆ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ಜಿಜ್ಞಾಸೆ!

Spread the love ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರಗಳ ಬಳಸಲು ಅನುವು ಮಾಡುವ ನಿಯಮ ತಿದ್ದುಪಡಿಯನ್ನು ಸುಗ್ರೀವಾಜ್ಞೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ