ಚಿಕ್ಕೋಡಿ : ಕರೆಂಟ್ ವೈರ್ ತಗುಲಿ ರೈತನೊಬ್ಬ ಸಾವು
ಬೆಳಗಾವಿ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಜಳಕಿ ತೋಟದ ನಿವಾಸಿ ಸದಾಶಿವ್ ಭೀಮಪ್ಪ ಜಳಕಿ 21 ವರ್ಷದ ಯುವಕ ಕರೆಂಟು ವೈರ್ ತಗೂಲಿ ಸಾವಿಗಿಡಾಗಿದ್ದಾನೆ
ಕರೆಂಟ್ ವೈರ್ ಕಟ್ಟಾಗಿದ್ದನ್ನು ನೋಡದೆ ತನ್ನದೇ ಜಮೀನಿನಲ್ಲಿ ಹಾದು ಹೋಗುವಾಗ ವೈರ್ ಗೆ ಟಚ್ ಆಗಿ ಈ ಘಟನೆ ಸಂಭವಿಸಿದೆ
ಸ್ಥಳಕ್ಕೆ ಹಾರುಗೇರಿ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಇನ್ನು ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಹೆಸ್ಕಾಂ ಇಲಾಖೆಯಿಂದ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ