ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬಿಸಾಕಿದ್ದ 88 ಸಾವಿರ ಹಣ ಯಾರದ್ದು?
ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಲೋಕಾಯುಕ್ತ ವಾರೆಂಟ್ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಕಚೇರಿಗಳ ಮೇಲೆ ಎರಡು ದಿನಗಳ ಹಿಂದೆ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದ್ದು, ತಡ ರಾತ್ರಿ ವರೆಗೂ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಾರಿ ಅಕ್ರಮ, ಅವವ್ಯಹಾರಗಳು ಕಂಡು ಬಂದಿವೆ.
ಹಾಗೂ 88 ಸಾವಿರ ದಾಖಲೆ ಇಲ್ಲದ ಹಣ ಸಿಕ್ಕಿದೆ. ಈ ಕುರಿತು ಇಲ್ಲಿದೆ
ಗುರುವಾರ ಬೆಳಿಗ್ಗೆ 11.45 ರ ಹೊತ್ತಿಗೆ ವಿಜಯಪುರ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ನೇತೃತ್ವದಲ್ಲಿ ಒಬ್ಬ ಡಿಎಸ್‌ಪಿ, ಐದು ಜನ ಇನ್‌ಸ್ಪೆಕ್ಟರ್ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ 40ಕ್ಕೂ ಅಧಿಕ ಸಿಬ್ಬಂದಿ ಮಹಾನಗರ ಪಾಲಿಕೆ ಜಲನಗರದ ಕೇಂದ್ರ ಕಚೇರಿ ಹಾಗೂ ಬಡಿ ಕಮಾನ್ ಬಳಿ ಇರುವ ವಲಯ ಕಚೇರಿ 1 ಮತ್ತು ಗಾಂಧಿ ಚೌಕಿಯಲ್ಲಿರುವ ವಲಯ ಕಚೇರಿ 2ರ ಮೇಲೆ ದಾಳಿ ನಡೆಸಿದ್ದರು.

ಕಾಗದ ಪತ್ರಗಳನ್ನು ತಡ ರಾತ್ರಿ 12ರ ವರೆಗೂ ಪರಿಶೀಲಿಸಿದರು. ಬಾರಿ ಅಕ್ರಮಗಳು ಪತ್ತೆಯಾಗಿವೆ.
‘ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ, ಪ್ರತಿಯೊಂದು ಕೆಲಸಕ್ಕೂ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕು, ಅಧಿಕಾರಿಗಳು ಕೆಲಸ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಾರೆ, ಅನಗತ್ಯವಾಗಿ ಸತಾಯಿಸುತ್ತಾರೆ ಎಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು’ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ್ ತಿಳಿಸಿದ್ದಾರೆ.

ಇನ್ನೂ ಲೋಕಾಯುಕ್ತ ‘ದಾಳಿ ವೇಳೆ ಬಡಿ ಕಮಾನ್ ಬಳಿ ಇರುವ ಉಪ ಕಚೇರಿಯಲ್ಲಿ ಬಿಸಾಡಲಾಗಿದ್ದ ₹88 ಸಾವಿರ ನಗದು ಪತ್ತೆಯಾಗಿದೆ. ಉಳಿದಂತೆ ಪಾಲಿಕೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಿರುವುದು ಕಂಡುಬಂದಿದೆ. *2024ರಿಂದ ಸಾರ್ವಜನಿಕರು ಸಲ್ಲಿಸಿರುವ ಇ ಖಾತಾ, ಅಂಗಡಿ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ, ಕಟ್ಟಡ ಪರವಾನಗಿ ಸೇರಿದಂತೆ ಇನ್ನಿತರ ಕೆಲಸಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಲ್ಲಿಸಿರುವ ಸಾವಿರಾರು ಅರ್ಜಿಗಳನ್ನು ಸಕಾರಣವಿಲ್ಲದೇ ಬಾಕಿ ಇರಿಸಿಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಲೋಕಾಯುಕ್ತ ದಾಳಿಯಿಂದ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಲೋಕಾಯುಕ್ತರ ದಾಳಿಯಿಂದಾಗಿ ಮಹಾನಗರ ಪಾಲಿಕೆ ಸಿಬ್ಬಂದಿ ಅಧಿಕಾರಿಗಳು ಬುದ್ದಿ ಕಲಿಯುವರೇ ಎಂದು ಕಾದುನೋಡಬೇಕಿದೆ.
Laxmi News 24×7