ದೇವನಹಳ್ಳಿ: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬುದು ಬೆಂಬಲಿಗರ ಆಸೆ. ಆದರೆ, ಅಧಿಕಾರದ ಹಂಚಿಕೆ ಬಗ್ಗೆ ನಮಗೆ ಗಾಬರಿ ಇಲ್ಲ, ನಿಮಗೇಕೆ ಗಾಬರಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.
ದೆಹಲಿಯಲ್ಲಿ ಹೈಕಮಾಂಡ್ ಭೇಟಿಗೆ ತೆರಳಿದ್ದ ಅವರು ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಕೆಲವೇ ಶಾಸಕರ ಬೆಂಬಲವಿದೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ನಾನು ಪಕ್ಷದ ಅಧ್ಯಕ್ಷ. ಪಕ್ಷದವರು ಏನು ಹೇಳಿದ್ದಾರೆ ಅಂತ ಈಗಾಗಲೇ ಸಿಎಂ ಉಲ್ಲೇಖಿಸಿದ್ದಾರೆ. ನಾನು ಮುಖ್ಯಮಂತ್ರಿಗಳ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸಿಎಂ ಅವರೇ ಉತ್ತರಿಸಿದ್ದಾರೆ. ಅವರು ಮಾತನಾಡಿದ ಮೇಲೆ ಪದೇ ಪದೇ ನಾನು ಮಾತನಾಡೋದು ಸರಿಯಲ್ಲ” ಎಂದು ಹೇಳಿದರು.