5 ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿರಲಿದೆ….!! ಹುಷಾರು!!!
ಭೂಕಂಪ ಮತೀಯ ಗಲಭೆಗಳು ಹೆಚ್ಚಾಗಿ, ಕೆಲ ದೇಶಗಳು ಅಳಿಸಿ ಹೋಗಲಿವೆ…; ಬೆಳಗಾವಿಯಲ್ಲಿ ಭವಿಷ್ಯ ನೂಡಿದ ಕೋಡಿಮಠದ ಶ್ರೀ
ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ ಎಂದು ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ ಎಂದು ಕೋಡಿಮಠದ ಶ್ರೀಗಳು ಬೆಳಗಾವಿಯಲ್ಲಿ ಭವಿಷ್ಯ ನುಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಕೋಡಿಮಠದ ಶ್ರೀಗಳು ಮತ್ತೇ ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ ಎಂದು ಕೋವಿಡ್ ಕುರಿತು ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ.ಜನರು ಹುಷಾರಾಗಿರೋದು ಒಳ್ಳೇಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ.
ಲೋಕಕ್ಕೆ ವಾಯು ಜಲದಿಂದ ಐದು ವರ್ಷ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘ ಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯವಾಗಿ ಅರಸನ ಮನೆಗೆ ಕಾರ್ಮೋಡ ಕವಿದಿತ್ತು ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ ಜನರಲ್ಲಿ ಅಶಾಂತಿ ಇದೆ.ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ.
ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ, ಹಾಗೂ ಭಯವಿದೆ. ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ.ಸಂಕ್ರಾಂತಿಯ ನಂತರ ಏನಾಗುತ್ತೆ ನೋಡಬೇಕು ಎಂದಿದ್ದಾರೆ.