ಬೆಳಗಾವಿ : ಬಿಡದಿ ಬಳಿಯ ಭದ್ರಪುರದಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣ….. ಕಠಿಣ ಕ್ರಮಕ್ಕಾಗಿ ಡಿಎಸ್ಎಸ್ ದಿಂದ ಗೃಹ ಸಚಿವರಿಗೆ ಮನವಿ
ಬಿಡದಿ ಬಳಿಯ ಭದ್ರಪುರದಲ್ಲಿ ನಡೆದ ಬಾಲಕಿ ಮೇಲಿನ
ಅತ್ಯಾಚಾರ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದಗೃಹ ಸಚಿವರಿಗೆ ಮನವಿ
ಕಾಮುಕರಿಗೆ ಕಠಿಣ ಶಿಕ್ಷೆ ನೀಡಲು ಪ್ರತ್ಯೇಕ ಕಾನೂನು ಜಾರಿಯಾಗಲಿ
ಆಗ್ರಹ ಮಾಡಿದ ಡಿಎಸ್ಎಸ್ ಪ್ರತಿನಿಧಿಗಳು.
ಬೆಂಗಳೂರಿನ ಬಿಡದಿ ಬಳಿ ಇರುವ ಬದ್ರಾಪುರದಲ್ಲಿ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಬೆಳಗಾವಿಯಲ್ಲಿ ಡಿಸಿ ಮೂಲಕ ಗೃಹ ಸಚಿವರಿಗೆ ಮನವಿ ಅರ್ಪಿಸಲಾಯಿತು
ಬೆಂಗಳೂರು ಬಿಡದಿ ಬಳಿ ಇರುವ ಬದ್ರಾಪುರದಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ
ಸಾಮೂಹಿಕ ಅತ್ಯಾಚಾರವನ್ನು ಖಂಡಿಸಲಾಯಿತು. ರಾಜ್ಯದಲ್ಲಿ ಪದೇ ಪದೇ ಮಹಿಳೆಯರ ಮೇಲೆ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿವೆ. ಸರ್ಕಾರ ಹಾಗೂ ಗೃಹ ಇಲಾಖೆ ಅತ್ಯಾಚಾರದಂತಹ ನೀಚ ಹೀನ ಕೃತ್ಯಗಳನ್ನು ಎಸಗುವ ಕಾಮುಕರಿಗೆ ಕಠಿಣವಾದ ಪ್ರತ್ಯೇಕ ಕಾನೂನು ಜಾರಿ ಮಾಡುವುದಲ್ಲದೆ
ಮುಂಜಾಗೃತ ಕ್ರಮವಾಗಿ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರವಹಿಸಿಬೇಕೆಂದು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಆನಂದ ತಾಯವ್ವಗೋಳ, ಸುರೇಶ ಸಣ್ಣಕ್ಕಿ, ಬಸಪ್ಪಾ ತಳವಾರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.