ನವದೆಹಲಿ: – ಕೊರೊನಾ ನಿಯಂತ್ರಣಕ್ಕೆ ತುರ್ತು ಸಂದರ್ಭದಲ್ಲಿ ಬಳಸಲು ಮಾನ್ಯತೆ ಪಡೆದಿರುವ ಫೈಝರ್ ಲಸಿಕೆ ಗುಣಮಟ್ಟದ ಬಗ್ಗೆ ಉತ್ಪಾದಕ ಕಂಪೆನಿಯೇ ಗೊಂದಲಕಾರಿ ಹೇಳಿಕೆ ನೀಡಿದೆ. ಇಂಗ್ಲೆಂಡ್ ಸರ್ಕಾರ ಮತ್ತು ಬಹರೈನ್ ಆರೋಗ್ಯ ಪ್ರಾಧಿಕಾರದಿಂದ ಅಂಗೀಕಾರ ಪಡೆದಿರುವ ಫೈಝರ್‍ಲಸಿಕೆಯನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ತುರ್ತು ಸಂದರ್ಭದಲ್ಲಿ ಬಳಸಬಹುದೆಂದು ನಿರ್ಣಯಿಸಲಾಗಿದೆ.
ಭಾರತ ಸರ್ಕಾರ ಕೂಡ ಈ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಒಪ್ಪಿ ಕೊಂಡಿದ್ದು, ಲಕ್ಷಾಂತರ ಡೊಸೇಜ್‍ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗ ಫೈಝರ್‍ನ ಸಿಇಒ ಆಲ್ಬರ್ಟ್ ಬೊರೊಲಾ ಅವರು ಲಸಿಕೆಯ ಗುಣ ಮಟ್ಟದ ಬಗ್ಗೆ ಖಚಿತ ಹೇಳಿಕೆ ನೀಡದೆ ಗೊಂದಲ ಉಂಟು ಮಾಡಿದ್ದಾರೆ. ಫೈಝರ್ ಲಸಿಕೆ ಪಡೆದ ಬಳಿಕ ಕೊರೊನಾದಿಂದ ಶೇ.95ರಷ್ಟು ಫಲಿತಾಂಶ ಕಾಣಲಿದೆ ಎಂದು ಹೇಳಲಾಗಿತ್ತು. ಸುಮಾರು 8ಲಕ್ಷ ಡೊಸೇಜ್‍ಗಳನ್ನು ಫೈಝರ್ ಕಂಪೆನಿ ಉತ್ಪಾದಿಸುತ್ತಿದೆ
ರಿಟನ್‍ನ ವಾಣಿಜ್ಯ ಸಚಿವ ಅಶೋಕ್ ಶರ್ಮಾ ಅವರು ಮುಂದಿನ ವಾರದೊಳಗಾಗಿ 8 ಲಕ್ಷ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ನಡುವೆ ಎನ್‍ಬಿಸಿ ಸುದ್ದಿ ಸಂಸ್ಥೆಗೆ ಫೈಝರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೆಸ್ಟರ್‍ವೋಲ್ಟ್ ಅವರು ಸಂದರ್ಶನ ನೀಡಿದ್ದು, ಲಸಿಕೆ ಪಡೆದ ನಂತರ ಕೊರೊನಾ ಮತ್ತೊಬ್ಬರಿಗೆ ಹರಡುವುದನ್ನು ತಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಅದು ಖಚಿತವಾಗಿಲ್ಲ ಎಂದು ಉತ್ತರಿಸಿದ್ದಾರೆ.
ನಮ್ಮ ಲಸಿಕೆ ಕೊರೊನಾವನ್ನು ಗುಣಪಡಿಸುವ ನಿಟ್ಟಿನಲ್ಲಿ ಶೇ.95ರಷ್ಟು ಸಾಮಥ್ರ್ಯ ಹೊಂದಿದೆ. ಆದರೆ, ಲಸಿಕೆ ಪಡೆದ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸೋಂಕು ಸಾಂಕ್ರಾಮಿಕವಾಗುವ ಬಗ್ಗೆ ಸ್ಪಷ್ಟತೆ ಇಲ್ಲ. ಆ ನಿಟ್ಟಿನಲ್ಲಿ ಇನ್ನೂ ಕೆಲ ಸಂಶೋಧನೆಗಳು ನಡೆಯಬೇಕು. ನಮಗೆ ಈವರೆಗೂ ಏನು ಗೊತ್ತಿದೆಯೋ ಅದನ್ನು ಮಾತ್ರ ಹೇಳಿದ್ದೇವೆ ಎಂದಿದ್ದಾರೆ.