ಬೆಳಗಾವಿ: ಜಿಲ್ಲೆಯ ಕಾಕತಿ ಸಮೀಪದ ದಾಬಾ ಬಳಿ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಬಾವಿಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದ ಸರೋಜಾ, ಸಬ್ಸಿಡಿ ಯೋಜನೆಯ ಅಸರೆಗಾಗಿ ಸಾಲದ ಅರ್ಧ ಹಣವನ್ನು ಯಮನಾಪುರದ ಹೊಳೆಪ್ಪ ದಡ್ಡಿ ಎಂಬ ವ್ಯಕ್ತಿಗೆ ನೀಡಿದ್ದರು. ಎಲ್ಲ ಕಂತು ತಾನೇ ಪಾವತಿಸುವ ಭರವಸೆ ನೀಡಿದ್ದ ಹೊಳೆಪ್ಪ ಮೋಸಮಾಡಿದ ಹಿನ್ನೆಲೆ, ಈ ಕಿರುಕುಳವನ್ನು ತಾಳಲಾರದೆ ಸರೋಜಾ ಸಾವಿಗೆ ಶರಣಾದರು.
ಈ ದುರ್ಘಟನೆಗೆ ಆಕ್ರೋಶಗೊಂಡ ಸ್ಥಳೀಯರು ಫೈನಾನ್ಸ್‌ಗಳ ಹಾವಳಿಯನ್ನು ಖಂಡಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭವಾಗಿದೆ.