Breaking News

ವಿವಿಧ ಪ್ರಕರಣಗಳನ್ನು ಭೇದಿಸಿದ ಪೊಲೀಸರು: ಭರ್ಜರಿ ಕಾರ್ಯಾಚರಣೆ.

Spread the love

ವಿಜಯಪುರ: ಭರ್ಜರಿ ಕಾರ್ಯಾಚರಣೆ ನಡೆಸಿರುವ ವಿಜಯಪುರ ಸಿಇಎನ್ ಪೊಲೀಸರು ಆನಲೈನ್ ಮೂಲಕ ವಂಚಿಸಲಾಗಿದ್ದ ನಾಲ್ಕು ಪ್ರಕರಣಗಳನ್ನು ಭೇದಿಸಿದ್ದು, ರೂ. 1 ಕೋ. 47 ಲಕ್ಷ 76 ಸಾವಿರದ 53 ನಗದನ್ನು ವಂಚನೆಗೆ ಒಳಗಾದ ಜನರಿಗೆ ಮರಳಿಸಿದ್ದಾರೆ. ಅಲ್ಲದೇ, ಈ ಪ್ರಕರಣ ಸಂಬಂಧ ಗುಜರಾತ ರಾಜ್ಯದ ಸೂರತ ಮೂಲದ ಮೂವರು ಮತ್ತು ತೆಲಂಗಾಣ ಮೂಲದ ಓರ್ವ ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

.. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಲಕ್ಷ್ಣಣ ನಿಂಬರಗಿ, ಜಿಲ್ಲೆಯ ಸಿಇಎನ್ ಕೈಂ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಡಿಜಿಟಲ್ ಅರೆಸ್ಟ್, ಕ್ರಿಷ್ಟೋ ಟ್ರೇಡಿಂಗ್, ಪಾರ್ಟ್ ಟೈಮ್ ಜಾಬ್ ಮತ್ತು ಷೇರ್ ಮಾರ್ಕೇಟ್ ಟ್ರೇಡಿಂಗ್ ನಂಥ ನಾನಾ ರೀತಿಯಲ್ಲಿ ಆನ್‌ಲೈನ್ ವಂಚನೆಗೊಳಗಾದವರಿಂದ ಒಟ್ಟು 12 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಪತ್ತೆಗೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಡಿಎಸ್ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ, ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.

ಈ ತಂಡ ನಾಲ್ಕು ಪ್ರಕರಣಗಳನ್ನುಭೇದಿಸಿದೆ ಎಂದು ತಿಳಿಸಿದರು. ಮೊದಲ ಪ್ರಕರಣದಲ್ಲಿ ವಿಜಯಪುರ ನಗರದ ಸೃಷ್ಟಿ ಕಾಲನಿಯಲ್ಲಿ ವಾಸಿಸುವ ಪ್ರಾಧ್ಯಾಪಕಿ ಶೈಲಜಾ ಶಿವಲಿಂಗಸ್ವಾಮಿ ಮುತ್ತಿನಪೆಂಡಿಮಠ ಅವರಿಗೆ ಡಿಜಿಟಲ್ ಅರೆಸ್ಟ್ ಮಾಡಿ ರೂ. 38 ಲಕ್ಷ ವಂಚನೆ ಮಾಡಲಾಗಿತ್ತು. ಈ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು ರೂ. 3152581 ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಲಾಗಿದೆ. ಬಾಕಿ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಅವರು ತಿಳಿಸಿದರು.

ಎರಡನೇ ಪ್ರಕರಣದಲ್ಲಿ ತಾಳಿಕೋಟಿ ಪಟ್ಟಣದ ನಿವಾಸಿ ರಾಜಕನ್ಯಾ ಬಸವರಾಜ ಕೊಂಗಂಡಿ ಅವರಿಗೆ ಕ್ಯಾಪಿಟಲಿಕ್ಸ್ ಎಂಬ ಟ್ರೇಡಿಂಗ್ ಅಪ್ಲಿಕೇಶನದಲ್ಲಿ ಹಣ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಹಣವನ್ನು ಯು.ಎಸ್. ಡಾಲರ್‌ಗೆ ಕನ್ವರ್ಟ್ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಡಾಲರ್. ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಬಿಟ್ ಕಾಯಿನ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಶೇ. 30 ರಷ್ಟು ಲಾಭಾಂಶ ಮಾಡಿ ಕೊಡುವುದಾಗಿ ನಂಬಿಸಿ ರೂ. 87 ಲಕ್ಷ ಹಣವನ್ನು ವಂಚಿಸಲಾಗಿತ್ತು. ಈ ಕೃತ್ಯ ಎಸಗಿದ ಆರೋಪಿತರನ್ನು ಪತ್ತೆ ಮಾಡಿ ವಿಚಾರಣೆ ಕುರಿತು ಹಾಜರಾಗಲು ನೋಟೀಸ್ ಜಾರಿ ಮಾಡಿ, ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು 68,25,710 ಹಣವನ್ನು ಪಿರ್ಯಾದಿಗೆ ಮರಳಿ ಕೊಡಿಸಲಾಗಿದೆ. ಬಾಕಿ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಲಕ್ಷ್ಮಣ ನಿಂಬರಗಿ ತಿಳಿಸಿದರು. ಮೂರನೇ ಪ್ರಕರಣದಲ್ಲಿ ಸಿಂದಗಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರಿಗೆ ಟ್ರೇಡ್ ಬುಲ್ಸ್ ಎಂಬ ಶೇರ್ ಟ್ರೇಡಿಂಗ್ ಆ್ಯಪ್ ನಲ್ಲಿ ಮಾರ್ಕೆಟ್ ಬೆಲೆಗಿಂತ ಕಡಿಮೆ ದರದಲ್ಲಿ ಷೇರು ಗಳನ್ನು ನೀಡುವುದಾಗಿ ನಂಬಿಸಿ ಅವರ ಕಡೆಯಿಂದ ರೂ. 1 ಕೋ. ಹಣ ಹಾಕಿಸಿಕೊಂಡು ಶೇರ್ ಮಾರ್ಕೇಟ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಭೇದಿಸಿ ಕೃತ್ಯ ಎಸಗಿದ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು ರೂ. 9,97,762 ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಲಾಗಿದೆ. ಅಲ್ಲದೇ, ಬಾಕಿ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಎಸ್ಪಿ ತಿಳಿಸಿದರು.

ನಾಲ್ಕನೇ ಪ್ರಕರಣದಲ್ಲಿ ವಿಜಯಪುರ ನಗರದ ನಿಖಿಲ ಶಿವಾನಂದ ಮೋಜಿ ಇವರಿಗೆ ದಿ ಓಕ್ಟಾ ಟ್ರೇಡಿಂಗ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ಯು.ಎಸ್. ಡಾಲರ್‌ಗೆ ಕನ್ವರ್ಟ್ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೇನ್ಸಿ ಪೇರ್, ಬಿಟ್‌ ಕಾಯಿನ್, ಟ್ರೇಡ್ ಮಾಡಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ದಿವಸ ಶೇ. 4 ರಷ್ಟು ಲಾಭಾಂಶ ಮಾಡಿ ಕೊಡುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿ ಅವರ ಕಡೆಯಿಂದ ರೂ. 2 ಕೋ. ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಲಾಗಿತ್ತು. ಈ ಪ್ರಕರಣವನ್ನು ಭೇದಿಸಿ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಒಟ್ಟು ರೂ. 38,00,000 ಗಳನ್ನು ಪಿರ್ಯಾದಿಗೆ ಮರಳಿ ಕೊಡಿಸಲಾಗಿದೆ. ಇನ್ನುಳಿದ ಬಾಕಿ ಹಣದ ಬಗ್ಗೆ ಆರೋಪಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಅವರು ತಿಳಿಸಿದರು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು ರೂ. 1,47,76,053 ಹಣವನ್ನು ಪಿರ್ಯಾದುದಾರರಿಗೆ ಮರಳಿ ಕೊಡಿಸಿಲಾಗಿದೆ ಎಂದು ಅವರು ತಿಳಿಸಿದರು. ಇದೇ ವೇಳೆ, ವಿಜಯಪುರ ನಗರ ಮತ್ತು ಜಿಲ್ಲಾದ್ಯಂತ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್‌ಗಳನ್ನು ಸಿಇಐಆರ್ ಪೊರ್ಟಲ್ ಮೂಲಕ ಅಂದಾಜು ರೂ. 3,44,000 ಮೌಲ್ಯದ ನಾನಾ ಕಂಪನಿಯ ಒಟ್ಟು 20 ಮೋಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ನಾನಾ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ಹೃದಯಾಘಾತದಿಂದ ಚೇರ್ ಮೇಲೆ ಕುಳಿತಲ್ಲೇ ವ್ಯಕ್ತಿ ಸಾವು…!

Spread the loveವಿಜಯಪುರ: ವ್ಯಕ್ತಿಯೊರ್ವ ಚೇರ್ ಮೇಲೆ ಕುಳಿತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ