Breaking News

ಸಿಎಂ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್‌ ಸರ್ಕಾರದ ಪತನ ಖಚಿತ: ಜಗದೀಶ್​ ಶೆಟ್ಟರ್

Spread the love

ಹುಬ್ಬಳ್ಳಿ: ಕಾಂಗ್ರೆಸ್​ನ ಕುರ್ಚಿ ಗುದ್ದಾಟ ಜೋರಾಗಿದೆ. ಸಿಎಂ ಕುರ್ಚಿಗಾಗಿ ಅವರಲ್ಲೇ ಗುದ್ದಾಟ ನಡೆದಿದೆ. ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಿಂದ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇದು ಒಂದಲ್ಲ ಒಂದು ದಿನ ಇದು ಹೊರ ಬರುತ್ತೆ ಅಂತ ಹೇಳಿದ್ದೆ.‌ ಈಗಾಗಲೇ ಔತಣಕೂಟ ಆರಂಭವಾಗಿದೆ.‌ ಕೆಲ ಸಚಿವರು ಸೇರಿ ಔತಣಕೂಟ ಆಯೋಜನೆ ಮಾಡಿದರು. ಆದರೆ, ಎಸ್‌ಸಿ, ಎಸ್‌ಟಿ ಶಾಸಕರು, ಮಂತ್ರಿಗಳ ಔತಣಕೂಟಕ್ಕೆ ಅಡ್ಡಗಾಲು ಹಾಕಿದರು.‌ ಅಡ್ಡಗಾಲು ಹಾಕೋ ಕೆಲಸವನ್ನು ಡಿ. ಕೆ. ಶಿವಕುಮಾರ್ ಮಾಡಿದ್ದಾರೆ” ಎಂದು ಆರೋಪಿಸಿದರು.

“ಸಚಿವರಾದ ಕೆ. ಎನ್‌. ರಾಜಣ್ಣ, ಎಂ. ಬಿ. ಪಾಟೀಲ್ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್‌ ಎಂಬ ಎರಡು ಗುಂಪುಗಳು ಇರುವುದು ಎದ್ದು ಕಾಣುತ್ತಿದೆ.‌ ಇದು ಮೊದಲು ಒಳಗೊಳಗೇ ಇತ್ತು, ಈಗ ಹೊರ ಬರುತ್ತಿದೆ.‌ ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆ” ಎಂದು ಹೇಳಿದರು.

ಊಟಕ್ಕೆ ಕರೆ ಕೊಟ್ಟವರು ಸ್ಪಷ್ಟೀಕರಣ ನೀಡಿದ್ದಾರೆ. ನಮ್ಮಲ್ಲಿ ಸಮಸ್ಯೆ ಇದೆ. ಆದರೆ, ಅದನ್ನು ಸರಿ ಮಾಡುವ ಕೆಲಸ ಹೈಕಮಾಂಡ್‌ನವರು ಮಾಡ್ತಾರೆ. ಎಸ್‌ಸಿ, ಎಸ್‌ಟಿ ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಸೇರಿದ್ದೇವೆ ಅಂತ ರಾಜಣ್ಣ ಹೇಳುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಬೇಕು. ಇದನ್ನು ಚರ್ಚೆ ಮಾಡೋಕೆ ಮಂತ್ರಿಗಳು ಸೇರಿದ್ರೆ ಜನ ನಂಬುತ್ತಾರಾ?. ಎಸ್‌ಸಿ, ಎಸ್‌ಟಿ ಜನರ ಮೇಲೆ ಅವರಿಗೆ ಕಾಳಜಿಯೇ ಇಲ್ಲ. ರಾಜಣ್ಣ ಹೇಳಿಕೆ ನೋಡಿದ್ರೆ ರಾಜಕೀಯ ಸಲುವಾಗಿ ಮಾಡ್ತಿದ್ದಾರೆ. ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿ ಅಲ್ಲ ಎಂದು ತಿಳಿಯುತ್ತದೆ. ಎಸ್‌ಸಿ, ಎಸ್‌ಟಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿನ್ನರ್ ಮೀಟಿಂಗ್ ಮಾಡುವ ಅವಶ್ಯಕತೆಯೇ ಇರಲಿಲ್ಲ” ಎಂದು ಹೇಳಿದರು.

ಪರಮೇಶ್ವರ್​ ಡಿನ್ನರ್ ಮೀಟಿಂಗ್ ರದ್ದಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಇದರ ಹಿಂದೆ ರಾಜಕೀಯ ಇದೆ. ಡಿ. ಕೆ. ಶಿವಕುಮಾರ್‌ಗೆ ತಮ್ಮ ವಿರುದ್ಧ ಷಡ್ಯಂತ್ರ ನಡೀತಾ ಇದೆ ಅಂತ ಅನಿಸಿದೆ. ಹೀಗಾಗಿ ಶತ್ರು ಸಂಹಾರದ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ” ಎಂದರು.


Spread the love

About Laxminews 24x7

Check Also

ಡಿ.ಕೆ. ಶಿವಕುಮಾರ್​ ಖಂಡಿತ ಸಿಎಂ ಆಗ್ತಾರೆ: ವಿನಯ್​ ಗೂರುಜಿ

Spread the loveಚಿಕ್ಕೋಡಿ(ಬೆಳಗಾವಿ): “ಅಜ್ಜಯ್ಯನ ಮೇಲಿರುವ ಗುರು ನಿಷ್ಠೆ, ಪಕ್ಷ ನಿಷ್ಠೆ, ಹಿರಿಯರ ಮೇಲಿರುವ ಭಕ್ತಿ ಮತ್ತು ನಾಟಕವಿಲ್ಲದ ಮಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ